ಮಳೆಗಾಲ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಮಾತ್ರ ಮಲೆನಾಡು ಪ್ರದೇಶ. ಆದ್ರೆ ಅದೇ ತರ ನಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ಸ್ಥಳ ಕಪ್ಪತ್ತಗುಡ್ಡ ಪ್ರವಾಸಿ ತಾಣವಾಗಿರುವ ನಮ್ಮ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕಪ್ಪತ್ತ ಗುಡ್ಡ ಎಂದೇ ಪ್ರಸಿದ್ಧಿ ಪಡೆದ ಈ ಸ್ಥಳಕ್ಕೆ ದಿನಾಲೂ ಸಾವಿರಾರು ಪ್ರವಾಸಿಗರು ಆಗಮಿಸಿ ಈ ಸ್ಥಳದಲ್ಲಿ ಕಾಲವನ್ನು ಕಳೆದು ಒಳ್ಳೆಯ ಅನುಭವದೊಂದಿಗೆ ಮರಳುತ್ತಾರೆ. ದಿನೇ ದಿನೇ ಬರುವವರ ಸಂಖ್ಯೆ ಹೆಚ್ಚುತ್ತಾ ಇದೆ.
ಅದೇ ರೀತಿಯಾಗಿ ಈ ಸ್ಥಳಕ್ಕೆ ಮುಂಡರಗಿ ಇಂದ 25 ಕಿಮೀ ವಾರದ ಕೊನೆಯ ದಿನ ಶನಿವಾರ ಮತ್ತು ರವಿವಾರ ಹೆಚ್ಚಿನ ಜನಸಂಖ್ಯೆ ಹರಿದು ಬರುತ್ತದೆ.
ಈ ಸ್ಥಳಕ್ಕೆ ಕುರಿತು ಒಂದು ಗಾದೆ ಇದೆ ಎಪ್ಪತ್ತುಗಿರಿ ನೋಡುವುದಕ್ಕಿಂತ ಒಂದು ಕಪ್ಪತ್ತಗಿರಿ ನೋಡುವುದು ಲೇಸು.
- ರಾಜಾಭಕ್ಷಿ




















