ಕೊಪ್ಪಳ/ ಗಂಗಾವತಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಹನ್ನೂರು ಗ್ರಾಮದ ನಿಂಗಪ್ಪ ಸವಣೂರು ಎನ್ನುವ 61 ವರ್ಷದ ವ್ಯಕ್ತಿ 102 ಕೆಜಿ ತೂಕದ ಜೋಳದ ಮೂಟೆ ಬೆನ್ನ ಮೇಲೆ ಹೊತ್ತು ಮಂಗಳವಾರ 575 ಮೆಟ್ಟಿಲುಗಳು ಇರುವ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ ಬೆಟ್ಟದ ಕೆಳಭಾಗದಲ್ಲಿರುವ ಪಾದಗಟ್ಟಿಗೆ ನಮಸ್ಕರಿಸಿ ಮೂಟೆ ಹೊತ್ತ ನಿಂಗಪ್ಪ ಎಲ್ಲಿಯೂ ನಿಲ್ಲದೆ ಒಂದು ತಾಸು ಎರಡು ನಿಮಿಷದಲ್ಲಿ ಶ್ರೀರಾಮ ಹಾಗೂ ಹನುಮನ ಸ್ಮರಣೆ ಮಾಡುತ್ತಾ ಬೆಟ್ಟ ಏರಿದರು. ನಂತರ ಜೋಳವನ್ನು ದೇವಸ್ಥಾನಕ್ಕೆ ಅರ್ಪಿಸಿ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಿಂಗಪ್ಪ ಹಿಂದೆ ಶ್ರೀಶೈಲದಿಂದ ಅಂಜನಾದ್ರಿಗೆ ಬಂದಾಗ ಜೋಳದ ಮೂಟೆ ಹೊತ್ತು ಮುಂದೊಂದು ದಿನ ಬೆಟ್ಟ ಏರುವುದಾಗಿ ಹರಕ್ಕೆ ಕಟ್ಟಿಕೊಂಡಿದ್ದೆ ಈಗ ಆ ಬೇಡಿಕೆ ಈಡೇರಿದೆ ದೇವರು ಆರೋಗ್ಯ ಚೆನ್ನಾಗಿ ಇಟ್ಟಿರುವುದರಿಂದಲೇ ಬೆಟ್ಟ ಏರಲು ಸಾಧ್ಯವಾಗಿದೆ ಎಂದು ಭಕ್ತಿಯಿಂದ ಹರ್ಷ ವ್ಯಕ್ತಪಡಿಸಿದರು.
ವರದಿ : ಜಿಲಾನಸಾಬ್ ಬಡಿಗೇರ



















