ದಿನಾಂಕ 22/07/2025 ರಂದು ಸಾಯಂಕಾಲ 5:00 ಗೆ ಅಥಣಿಯ ಪ್ರವಾಸಿ ಮಂದಿರಕ್ಕೆ ಮಾನ್ಯ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಯವರು ಭೇಟಿ ನೀಡಿ ಜನರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದರು.
ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಅಥಣಿಯ ಮಾಜಿ ಜನಪ್ರಿಯ ಶಾಸಕರಾದ ಮಹೇಶ್ ಕುಮಟ್ಟಳ್ಳಿ ಅವರು ಜೈನ ಸಮುದಾಯದ ಮುಖಂಡರ ಜೊತೆ ಬಂದು ಜೈನ ಸಮುದಾಯಕ್ಕೆ ಜೈನ ಅಭಿವೃದ್ಧಿ ನಿಗಮ ಮಾಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ಜೈನ ಸಮುದಾಯದ ಬಹಳಷ್ಟು ಮುಖಂಡರು ಪಾಲ್ಗೊಂಡಿದ್ದರು.
ಜೈನ ಮುಖಂಡರು ಮಾತನಾಡಿ ನಮ್ಮ ಸಮಾಜದ ಕೊಡುಗೆ ಅಪಾರವಾಗಿದೆ. ಜೈನ ಸಮುದಾಯ ಕರ್ನಾಟಕ ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ, ಜೈನ ಸಮಾಜವು ತನ್ನದೇ ಆದ ಸಾಹಿತ್ಯವನ್ನು ಹೊಂದಿದೆ, ಇದು ತೀರ್ಥಂಕರರ ಜೀವನ ಮತ್ತು ಬೋಧನೆಗಳನ್ನು ವಿವರಿಸುತ್ತದೆ, ಕರ್ನಾಟಕದಲ್ಲಿ ಬಹಳಷ್ಟು ಜನ ಜೈನ ಸಮುದಾಯದವರು ಕಡು ಬಡವರಾಗಿದ್ದು, ಅದಕ್ಕಾಗಿ ಜೈನ ಅಭಿವೃದ್ಧಿ ನಿಗಮ ಅತಿ ಅವಶ್ಯಕವಾಗಿದೆ ಎಂದು ಹೇಳಿ ಮನವಿಯನ್ನು ಸಲ್ಲಿಸಿದರು.
ಇದೇ ಸಮಯದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯವರು ಕೂಡ ಮನವಿ ಸಲ್ಲಿಸಿದರು. ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಅವರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಈ ಭಾಗದ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ ಹಾಗೂ ಅಥಣಿ ಮುಂತಾದ ಸ್ಥಳಗಳಲ್ಲಿ ಬಾಬಾಸಾಹೇಬರು ಬೆಟ್ಟಿ ನೀಡಿದ್ದಾರೆ. ಅಂಬೇಡ್ಕರ್ ಅವರು ಚಿಕ್ಕೋಡಿಯ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ವಾದ ಮಂಡಿಸಿದ್ದಾರೆ ಈ ಎಲ್ಲಾ ಕಾರಣಗಳಿಂದ ಹಾಗೂ ಐತಿಹಾಸಿಕ ದೃಷ್ಟಿಯಿಂದ ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ರಚನೆಯಾಗುವ ಜಿಲ್ಲೆ “ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಿಲ್ಲೆ “ಎಂದು ನಾಮಕರಣ ಮಾಡಬೇಕೆಂದು ಮನವಿಯನ್ನು ಸಲ್ಲಿಸಿದರು.
ಇದಾದ ಬಳಿಕ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ಸಿನ ಹಲವು ಮುಖಂಡರಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿ ಈಗಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತಾಡಿದರು.
ಇದೇ ವೇಳೆ ಮುಖಂಡರಾದ, ಸದಾಶಿವ ಬುಟಾಳಿ, ಗಜಾನನ್ ಮಂಗಸೂಳಿ, ಸಿದ್ದಾರ್ಥ್ ಸಿಂಗೆ, ಅಸ್ಲಾಂ ನಾಲಬಂಧ, ಸಂಜೀವ್ ಕಾಂಬಳೆ, ವಿಜಯಕುಮಾರ್ ಬಡಚಿ, ರಮೇಶ್ ಸಿಂದಗಿ, ರಾವಸಾಬ್ ಐಹೊಳೆ, ಶಿವಾನಂದ್ ಸೌದಾಗರ್, ಬಸವರಾಜ ಬುಟಾಳಿ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ ಕರುನಾಡ ಕಂದ ಅಥಣಿ.



















