ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಗಳಖೋಡದಲ್ಲಿ ” ಬಸವ ಪುರಾಣ -ಓಂಕಾರ ನಾಮಸ್ಮರಣೆ “

ಬಾಗಲಕೋಟೆ/ ಮುಧೋಳ : ದಿ .23/07/25 ಶ್ರಾವಣ ಮಾಸವು ಆರಂಭಗೊಂಡಾಗ ನಮ್ಮ ನಾಡಿನಲ್ಲಿ ಹಬ್ಬಗಳಿಗೆ ಚಾಲನೆ ಸಿಕ್ಕಂತಾಗುತ್ತದೆ, ಒಂದೊಂದು ಹಬ್ಬಕ್ಕೂ ಅದರದ್ದೇ ಆದಂತ ಮಹತ್ವವಿದೆ. ಸಾಂಸ್ಕೃತಿಕವಾಗಿ ಈ ನಾಡಿನಲ್ಲಿ ಹಬ್ಬ ಉತ್ಸವಗಳನ್ನು ಹಾಗೂ ವೈವಿಧ್ಯಮಯವಾದ ಪರಂಪರೆಗಳನ್ನು ಈ ನಾಡಿನಲ್ಲಿ ನಾವೆಲ್ಲಾ ಕಾಣುತ್ತೇವೆ ನಮ್ಮ ನಾಡು ಸಾಂಸ್ಕೃತಿಕ ಸಂಭ್ರಮಗಳಿಗೆ ತವರು ಮನೆ, ಸಾಂಸ್ಕೃತಿಕ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿರುವುದು ಇಂತಹ ಆಚರಣಾತ್ಮಕ ಪರಂಪರೆಗಳ ಮೂಲಕವೇ. ಹಬ್ಬಗಳು ಕೇವಲ ಮನರಂಜನೆಗೆ ಅಲ್ಲ. ಇದರ ಹಿಂದೆ ಆಧ್ಯಾತ್ಮವಿದೆ, ಸಾಮಾಜಿಕ ಆಯಾಮವಿದೆ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಅಡಗಿದೆ ಹಾಗಾಗಿ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೆ ಜುಲೈ ಶುಕ್ರವಾರ ದಿ.25 ರಿಂದ ಒಂದು ತಿಂಗಳ ಕಾಲ “. ಸಾಧು ಚಕ್ರವರ್ತಿ ಸದ್ಗುರು ಶ್ರೀ ಶಿವಾನಂದ ಬಾರತಿ ಶ್ರೀಗಳ ಕೃಪಾಶೀರ್ವಾದದಿಂದ ಸಾಂಸ್ಕೃತಿಕ ನಾಯಕ, ವಿಶ್ವ ಮಾನ್ಯ ಪುರುಷ ಜಗದ್ಗುರು ಬಸವಣ್ಣನವರ ಜೀವನಾಧಾರಿತ ತತ್ವ-ದಶ೯ನ “ಬಸವ ಪುರಾಣವು ಇಲ್ಲಿಯ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆಯಲಿದೆ ಎಂದು ಆಶ್ರಮದ ಪ. ಪೂ. ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 5.30ರಿಂದ 6.30 ರ ವರೆಗೆ ಶ್ರೀ ಸಿದ್ಧಾರೂಢರ ಪಾರಾಯಣ, ಓಂಕಾರ ನಾಮಸ್ಮರಣೆ, ಮಂಗಲ, ಪ್ರಸಾದ ಸಂಜೆ.8 ರಿಂದ ರಿಂದ 9 ರ ವರೆಗೆ ಬಸವ ಪುರಾಣವು ಪ.ಪೂ. ಶರಣಬಸವ ಶಾಸ್ತ್ರಿಗಳಿಂದ ಜರುಗುವುದು. ಅಲ್ಲದೆ ಆಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 2025ರ ಶ್ರಾವಣ ಸಂಭ್ರಮವು ವಿಜೃಂಭಣೆಯಿಂದ ಜರುಗಲಿದೆ ಎಂದು ಪ. ಪೂ. ಕುಮಾರ ಗುರುಪ್ರಸಾದ್ ಸ್ವಾಮೀಜಿ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!