ಬಳ್ಳಾರಿ/ ಕಂಪ್ಲಿ : ತಾಲೂಕು ಸಮೀಪದ ಬುಕ್ಕಸಾಗರ ಗ್ರಾಪಂಯ ನೂತನ ಅಧ್ಯಕ್ಷರಾಗಿ ಗೊಂಚೆಗೇರಿ ಹುಲುಗಪ್ಪ ಅವಿರೋಧವಾಗಿ ಆಯ್ಕೆಗೊಂಡರು.
ಹಿಂದಿನ ಅಧ್ಯಕ್ಷ ವಿ.ಕೆ ಹನುಮಂತಪ್ಪ ಅವರ ನಿಧನದ ಹಿನ್ನಲೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿ(ತಹಶೀಲ್ದಾರ) ಶೃತಿ ಮಲ್ಲಪ್ಪಗೌಡ್ರು ಇವರ ನೇತೃತ್ವದಲ್ಲಿ ಬುಧವಾರ ಇಲ್ಲಿನ ಗ್ರಾ. ಪಂ. ಯ ಕಛೇರಿಯಲ್ಲಿ ಚುನಾವಣೆ ನಡೆಯಿತು.
ಇಲ್ಲಿನ ಚುನಾವಣೆ ಪ್ರಕ್ರಿಯೆಯಲ್ಲಿ ಗೊಂಚೆಗೇರಿ ಹುಲುಗಪ್ಪ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಪರಿಣಾಮ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ನೂತನ ಅಧ್ಯಕ್ಷ ಹುಲುಗಪ್ಪ ಇವರು ಮಾಲಾರ್ಪಣೆ ಸ್ವೀಕರಿಸಿದ ನಂತರ ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ನಮ್ಮನ್ನು ಆಯ್ಕೆ ಮಾಡುವ ಮೂಲಕ ಮತ್ತಷ್ಟು ಜವಾಬ್ದಾರಿ ವಹಿಸಿದ್ದು, ಎಲ್ಲರ ಪ್ರೀತಿ, ವಿಶ್ವಾಸದೊಂದಿಗೆ ಗ್ರಾ. ಪಂ. ಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಡಿಒ ಟಿ.ಎ.ರಾಜೇಶ್ವರಿ, ಉಪಾಧ್ಯಕ್ಷೆ ರಮಾದೇವಿ, ಸದಸ್ಯರಾದ ಗಾಯತ್ರಿ, ಗಾಳೆಮ್ಮ ಕುರುಬರ, ವೆಂಕಟೇಶ ಬಸಾಪೂರ, ದ್ಯಾವಮ್ಮವಡ್ರು, ಜಡೆಯ್ಯಸ್ವಾಮಿ ಎಸ್ ಎಂ, ರಮೇಶಕುಮಾರ, ರಮಾದೇವಿ, ಡಿ.ಜಿ.ಚನ್ನಬಸಮ್ಮ, ಹನುಮಕ್ಕ, ಲಕ್ಷ್ಮಿ ಹರಿಜನ, ಬಿ.ಶಶಿಧರ, ಶೇಕ್ಷಾವಲಿ, ಶೈನಾಜ್ ಬೇಗಂ, ರೇವಣ್ಣ, ವಾಣಿ, ಎ.ಶಂಕ್ರಪ್ಪ, ವರಲಕ್ಷ್ಮಿ, ಜಿ.ಮಲ್ಲೇಶ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ




















