ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೋಷಕರ-ಶಿಕ್ಷಕರ ಸಭೆ

ಬೆಳಗಾವಿ/ ಬೈಲಹೊಂಗಲ: ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅವಶ್ಯವಾಗಿದ್ದರೆ ಪಾಲಕ-ಪೋಷಕರು‌ ನೀಡುವ ಸ್ಪೂರ್ತಿದಾಯಕ ವಾತಾವರಣ ಅತ್ಯವಶ್ಯಕವಾಗಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ನಗರದ ಹೊರವಲಯದಲ್ಲಿರುವ ಕಾರ್ಮೇಲ್ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಪೋಷಕರ-ಶಿಕ್ಷಕರ ಸಭೆಯಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ, ಪ್ರೌಢಶಾಲಾ ಶಿಕ್ಷಣದಲ್ಲಿ ಪೋಷಕರ-ಶಿಕ್ಷಕರ ಸಭೆ ಮಹತ್ವದ್ದಾಗಿದ್ದು ಪೋಷಕರು ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು, ಮಗುವಿನ ಕಲಿಕಾ ಸಾಮರ್ಥ್ಯವನ್ನು ಬೆಂಬಲಿಸಲು ಕಲಿಕಾತಂತ್ರಗಳನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಪಡೆಯುತ್ತಾರೆ. ಶೈಕ್ಷಣಿಕ ಫಲಿತಾಂಶಗಳ ಸುಧಾರಿಸಲು ಪಾಲಕರು ಮಕ್ಕಳಲ್ಲಿ ಸೃಜನಾತ್ಮಕ ಭಾವನೆ ಬೆಳಿಸುವುದು. ಮಕ್ಕಳು ಅಂಕಗಳಿಸುವ ಯಂತ್ರವಾಗದೆ, ಸಮಾಜದಲ್ಲಿ ಉತ್ತಮ‌ ನಡತೆ ಸಂಸ್ಕಾರ ಬೆಳೆಸಿಕೊಂಡು ಕ್ರೀಡೆ, ಧಾರ್ಮಿಕ ಆಚಾರ ವಿಚಾರಗಳು ಇತರರ ಜೊತೆ ಹೊಂದಾಣಿಕೆ ಸರಳತೆಯೊಂದಿಗೆ ರಚನಾತ್ಮಕ ಕಾರ್ಯಗಳನ್ನು ಮೈಗೂಡಿಸಿಕೊಂಡಾಗ ಆತನ ಸರ್ವಾಂಗೀಣ ಬೆಳವಣಿಗೆಗೆ ಪಾಲಕರು ಅನುವು ಮಾಡಿಕೊಟ್ಟಂತಾಗುತ್ತದೆ.
ಮಕ್ಕಳಲ್ಲಿ ಇತರರ ವಿದ್ಯಾರ್ಥಿಗಳ ಜೊತೆ ಬೆರೆಯುವದನ್ನು ಕಲಿಸದಿದ್ದರೆ ಏಕಾಂಗಿತನ ಆತನ ಸಾಧನೆಗೆ ಅಡ್ಡಿಯಾದರೆ ದುರ್ಗುಣರ ಸಂಘ ಆತನ ಅವನತಿಗೆ ದಾರಿಯಾಗುತ್ತದೆ.
ಪಾಲಕರು ಮಕ್ಕಳಲ್ಲಿ ಮೌಲ್ಯವನ್ನು ಬೆಳೆಸಬೇಕೆಂದರೆ ಪಾಲಕರು ಮೌಲ್ಯವನ್ನು ಬೆಳಿಸಿಕೊಂಡಿರಬೇಕು. ಧಾರಾವಾಹಿಗಳ ಕ್ರೂರತೆ, ಮೊಬೈಲ್ ಗಳ ದುಷ್ಪರಿಣಾಮದ ಅರಿವು ಮಕ್ಕಳಲ್ಲಿ ಬಿಂಬಿಸುವಾಗ ಅವುಗಳ ಬಳಕೆಯನ್ನು ಪಾಲಕರು ಬಿಡಬೇಕು. ಮಕ್ಕಳಿಗೆ ಹಣ ನೀಡಿದರೆ ಅವರ ಅವಶ್ಯಕತೆಗಳನ್ನು ಪೂರೈಸಿದರೆ ಯಶಸ್ವಿಯಾಗಲಾರರು. ಅವರ ಹಸಿವಿಗೆ ತಕ್ಕಂತ ಪೌಷ್ಟಿಕ ಆಹಾರ ನೀಡುವದರೊಂದಿಗೆ ಅವರ ಚಲನವಲನಗಳ ಮೇಲೆ ಪಾಲಕರ ಗಮನವಿರಬೇಕು ಅವರಿಗಾಗಿ ದಿನದ 24 ಘಂಟೆ ಶ್ರಮವಹಿಸಿ ಹಣ ಗಳಿಸದೆ ಅವರಿಗಾಗಿ ದಿನಕ್ಕೆ 2ರಿಂದ 4 ಘಂಟೆ ಸಮಯ ನೀಡಿ ಜಗತ್ತಿನ ಸಾಧಕರ ಇತಿಹಾಸದೊಂದಿಗೆ ಸೋತು ಗೆದ್ದವರ ಪ್ರೇರಣೆ ತಿಳಿಸಿ, ದೇಶದ ಇತಿಹಾಸ ನೆನಪಿಸಿದಾಗ ಉತ್ತಮ ಸತ್ ಪ್ರಜೆಗಳಾಗುತ್ತಾರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.
ನಗರದಲ್ಲಿ ಕಾರ್ಮೆಲ್ ಶಾಲೆ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳೊಂದಿಗೆ ತಂದೆ ತಾಯಿಗಳ ವಾತ್ಸಲ್ಯ ವಂಚಿತ ವಿಕಲಚೇತನ ಮತ್ತು ಬದ್ದಿಮಾಂದ್ಯ ಮಕ್ಕಳಿಗೆ ವಾತ್ಸಲ್ಯ ಕೇಂದ್ರವಾಗಿ ಹೊರಹೊಮ್ಮಿದ್ದು ಶ್ಲಾಘನೀಯ. ಶಾಲೆಯ ಅಸಾಧಾರಣ ಸಹಪಠ್ಯ ಚಟುವಟಿಕೆಗಳು ಶಿಸ್ತು, ಕ್ರೀಡಾಶೀಲತೆ, ಮೌಲ್ಯಾಧಾರಿತ ಶಿಕ್ಷಣ ಮತ್ತು ಆತ್ಮವಿಶ್ವಾಸದ ಕಲಿಕೆಯೊಂದಿಗೆ ವಿಶೇಷ ಮಕ್ಕಳನ್ನು ಸುಧಾರಿಸುವ ಶಾಲೆಯ ಶಿಕ್ಷಕರ ವರ್ಗದ ಕಾರ್ಯ ಮೆಚ್ಚುವಂತದ್ದು ಸುಸಂಗತ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುತ್ತಿರುವ ಮುಖ್ಯೊಪಾಧ್ಯಯಿನಿ ಭಗಿನಿ ರೀತಾ ಪೀಂಟೊರವರ ಕಾರ್ಯ ಸದಾ ಸ್ಮರಣೀಯ ಎಂದರು.
ಮುಖ್ಯಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ಸುಲೋಚನಾ ಮೆಕ್ಕೆದ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕ ಅರವಿಂದ ತೋರಣಗಟ್ಟಿ ವಂದಿಸಿದರು.
ಶಿಕ್ಷಕರಾದ ಕುತ್ಸಿಯಾ ರೀಝಾ, ನಾಗರಾಜ ಕಕ್ಕಯ್ಯನವರ ಪಾಲಕರ ಸಮಿತಿ ರಚಿಸಿದರು. ಕಾರ್ಯಕ್ರಮದಲ್ಲಿ ನೂರಾರು ಪಾಲಕರು ಉಪಸ್ಥಿರಿದ್ದರು.

ವರದಿ ಮಂಜು.ಎಂ. ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!