ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಒತ್ತಾಯ

ಕಲಬುರಗಿ/ ಕಾಳಗಿ : ರೇವಾಯಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಮೂಲಸೌಕರ್ಯವಿಲ್ಲದೆ ಭಕ್ತಾದಿಗಳು ಪರದಾಡುವಂತಾಗಿದೆ. ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯವಿದ್ದು ಮೂಲಸೌಕರ್ಯವಿಲ್ಲದೆ ಬರಡಾಗುತ್ತಿದೆ. ಈ ಭಾಗದ ಅಭಿವೃದ್ಧಿ ಆಗಬೇಕೆಂಬುದೇ ಭಕ್ತಾದಿಗಳ ಆಶಯವಾಗಿದೆ ವರ್ಷದಲ್ಲಿ ಎಂಟು ತಿಂಗಳ ಪರ್ಯಂತ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನವು ಭಕ್ತರಿಂದ ತುಂಬಿ ತುಳುಕುತ್ತಿದೆ. ಲಕ್ಷ ಲಕ್ಷ ಜನ ಭಕ್ತಾದಿಗಳು ಜನಸಾಗರ ಹರಿದು ಬರುತ್ತಿದ್ದಾರೆ. ವಿಶೇಷ ಎಂದರೆ ಶ್ರಾವಣ ಮಾಸದಲ್ಲಿ ಜಾತ್ರೆಗೆ ಬೇರೆ ಬೇರೆ ರಾಜ್ಯಗಳಿಂದ ಆಂಧ್ರ, ಮಹಾರಾಷ್ಟ್ರ,ತೆಲಂಗಾಣ, ಗೋವಾ, ಮತ್ತು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬರುತ್ತಾರೆ. ಈ ದೇವಸ್ಥಾನದಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿ ಸಾರ್ವಜನಿಕರ ಒತ್ತಾಯವಾಗಿರುತ್ತದೆ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ವ್ಯವಸ್ಥೆ, ರಸ್ತೆಯ ಬೀದಿಯಲ್ಲಿ ದೀಪ, ಗೋ ಶಾಲೆಯಲ್ಲಿ ಗೋವುಗಳ ನಿರ್ವಹಣೆಗಾಗಿ ಮುಜರಾಯಿ ಇಲಾಖೆಯ ಮೂಲಕ ಸಿಬ್ಬಂದಿ ನೇಮಕ, ಶ್ರೀ ರೇವಣಸಿದ್ದೇಶ್ವರ ಗುಡಿಯಲ್ಲಿ ಸಿಬ್ಬಂದಿ ನೇಮಕ, ವಿವಿಧ ರೀತಿಯ ಸಸ್ಯಗಳನ್ನು ನೆಡಬೇಕು, ಹೋಂ ಗಾರ್ಡ್ ನೇಮಕವಾಗಬೇಕು, ಸಿ ಸಿ ಕ್ಯಾಮೆರಾಗಳ ದುರಸ್ತಿ, ಹೊಸ ಕ್ಯಾಮೆರಾಗಳ ಅಳವಡಿಕೆ ಆಗಬೇಕು ಹೀಗೆ ಹತ್ತು ಹಲವು ವಿಷಯಗಳು ಶ್ರೀ ರೇವಣಸಿದ್ದೇಶ್ವರ ಗುಡಿಯಲ್ಲಿ ಅಭಿವೃದ್ಧಿ ಆಗಬೇಕು ಅದರ ಕಡೆಗೆ ಮಾನ್ಯ ಶ್ರೀ ಸಹಾಯಕ ಆಯುಕ್ತರು ಶ್ರೀ ರೇವಣಸಿದ್ದೇಶ್ವರ ರೇವಾಯಿ ರಟಕಲ ದೇವಸ್ಥಾನವು ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಕಲಬುರ್ಗಿ ಅಧೀನದಲ್ಲಿ ಇರುವುದರಿಂದ ಹಲವು ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯ ಶ್ರೀ ಸಹಾಯಕ ಆಯುಕ್ತರು ಸೇಡಂ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕ ಅಧ್ಯಕ್ಷರು ಕಾಳಗಿ, ಶರಣಬಸಪ್ಪ ಮಮ್ ಶೆಟ್ಟಿ ಜಿಲ್ಲಾಧ್ಯಕ್ಷರು, ಶಿವರಾಜ್ ಪಾಟೀಲ್ ಗೋಣಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಗಿರೀಶ್ ದೇವರಮನಿ, ಶಿವಪ್ಪ ಬಡವಡಗಿ, ಅಪ್ಪಣ್ಣ ದೊಡ್ಡಮನಿ ಗ್ರಾಮ ಪಂಚಾಯತ್ ಸದಸ್ಯರು, ದಿಲೀಪ್ ಗೋಣಿಗಿ ಮತ್ತು ಶ್ರೀ ರೇವಣಸಿದ್ದೇಶ್ವರ ಭಕ್ತರು ಸೇರಿದಂತೆ ಇತರರು ಈ ಮನವಿ ಪತ್ರ ಕೊಡುವ ಸಂದರ್ಭದಲ್ಲಿ ಭಾಗಿಯಾಗಿದ್ದರು.

ವರದಿ ಚಂದ್ರಶೇಖರ ಅರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!