ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ-ಬೆನಕನ ಕಾಲುವೆಯಲ್ಲಿ ಅಪಾರ ಪ್ರಮಾಣದ ನೀರು : ಜಮೀನಿಗೆ ನುಗ್ಗಿದ ನೀರು.

ಬಳ್ಳಾರಿ/ ಕಂಪ್ಲಿ : ಪಟ್ಟಣದ ಗಂಗಾವತಿ ರಸ್ತೆಯ ಬೆನಕನ ಕಾಲುವೆಯಲ್ಲಿ ಅಪಾರ ಪ್ರಮಾಣದ ನೀರು ಬಂದಿದ್ದು, ಕಾಲುವೆ ತುಂಬಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು,ಇತ್ತೀಚೆಗೆ ನಾಟಿಮಾಡಿದ ಬತ್ತದ ಗದ್ದೆ,ಬಾಳೆ ತೋಟಗಳಿಗೆ ನೀರು ನುಗ್ಗಿದೆ.
ಕಳೆದ ಮಧ್ಯಾಹ್ನದಿಂದ ರಾತ್ರಿಯವರೆಗೂ ನಿರಂತರ ಮಳೆಯಾಗಿರುವುದು ಒಂದೆಡೆಯಾದರೆ, ತುಂಗಭದ್ರಾ ನದಿಗೂ ಅಪಾರ ಪ್ರಮಾಣದ ನೀರು ಬರುತ್ತಿದ್ದು, ನದಿಯಿಂದಲೂ ಸಹಿತ ಕಾಲುವೆಗೆ ನೀರನ್ನು ಬಿಟ್ಟಿರುವುದು ಇನ್ನೊಂದೆಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕಾಲುವೆಗೆ ಅಪಾರ ಪ್ರಮಾಣದ ನೀರು ಬರುತ್ತಿದ್ದು, ಬೆನಕನ ಕಾಲುವೆ ಹತ್ತಿರ ಕಾಲುವೆಯ ಹತ್ತಿರ ರಕ್ಷಣಾ ಗೋಡೆಗಳು ಎತ್ತರವಾಗಿಲ್ಲದೇ ಇರುವುದರಿಂದ ಕಾಲುವೆಯ ನೀರು ತುಂಬಿ ಹರಿಯುತ್ತಿದ್ದು ಅಪಾರ ಪ್ರಮಾಣದ ನೀರು ಅಕ್ಕಪಕ್ಕದ ಜಮೀನಿಗೆ ನುಗ್ಗಿದ್ದು, ಸಂಜೆಯಾದರೂ ಕಾಲುವೆಯಿಂದ ನೀರು ಹರಿಯುತ್ತಿತ್ತು. ಇದರಿಂದ ಕಾಳುವೆ ಅಕ್ಕಪಕ್ಕದಲ್ಲಿ ಇತ್ತೀಚೆಗೆ ನಾಟಿ ಮಾಡಿದ ಭತ್ತದ ಜಮೀನುಗಳು ಜಲಾವೃತಗೊಂಡಿದ್ದವು. ಜೊತೆಗೆ ಅಕ್ಕಪಕ್ಕದ ಬಾಳೆತೋಗಳಿಗೂ ನೀರು ನುಗ್ಗಿದೆ. ಅಪಾರ ಪ್ರಮಾಣದ ನೀರು ಭತ್ತ ನಾಟಿ ಮಾಡಿದ ಗದ್ದೆಗೆ ನುಗ್ಗಿರುವುದರಿಂದ ಭತ್ತದ ಸಸಿಗಳಿಗೆ ಹಾನಿಯಾಗಲಿದ್ದು, ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಕೋಟ್ಃ- ನದಿಯಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿರುವುದರ ಜೊತೆಗೆ ಕಳೆದ ಸಂಜೆ ಭಾರಿ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಕಾಲುವೆ ಮೇಲ್ಭಾಗದ ಜಮೀನುಗಳಿಂದಲೂ ಅಧಿಕ ಪ್ರಮಾಣದ ನೀರು ಕಾಲುವೆಗೆ ಬಂದಿರುವುದರಿಂದ ಬೆನಕನ ಕಾಲುವೆಯ ಹತ್ತಿರ ಕಾಲುವೆ ತುಂಬಿ ಹರಿಯುತ್ತಿದ್ದು, ಕೂಡಲೇ ಕಾಲುವೆಗೆ ಬಿಡುವ ನೀರನ್ನು ಕಡಿಮೆ ಮಾಡಲಾಗುವುದು ಎಂದು ಕಮಲಾಪುರ ನೀರಾವರಿ ಇಲಾಖೆಯ ಕಿರಿಯ ಅಭಿಯಂತರ ವೀರಭದ್ರಯ್ಯಸ್ವಾಮಿ ತಿಳಿಸಿದರು.

ವರದಿ : ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!