ವಿಜಯಪುರ/ ತಾಳಿಕೋಟೆ: ಕರ್ನಾಟಕ ರಾಜ್ಯ ವೀಲ್ ಚೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ನ 2025-27 ನೇ ಸಾಲಿನ ಪ್ರಧಾನ ಕಾರ್ಯದರ್ಶಿಯಾಗಿ ಪಟ್ಟಣದ ಅಂತರಾಷ್ಟ್ರೀಯ ಪ್ಯಾರಾ ಕ್ರೀಡಾಪಟು ಸಂಜೀವಕುಮಾರ ಹಜೇರಿ ಆಯ್ಕೆಯಾಗಿದ್ದಾರೆ. ಕರ್ನಾಟಕ ವೀಲ್ ಚೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಕಾಂಚನ್ ಖೋಟ್ ಅವರು ತಮ್ಮ ಆದೇಶ ಪತ್ರದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನಿಮ್ಮ ಪಾತ್ರವೂ ಮಹತ್ವ ಪೂರ್ಣವಾಗಿದ್ದು ಕೆಲವು ಪ್ರಮುಖ ವಿಷಯಗಳನ್ನು ಒಳಗೊಂಡಿದೆ ಅದರಲ್ಲಿ ರಾಜ್ಯ ವೀಲ್ ಚೇರ್ ಎಲ್ಲಾ ಆಡಳಿತ ಸೂಚನೆಗಳು ಮತ್ತು ದಾಖಲೆಗಳನ್ನು ನಿರ್ವಹಿಸಿ ಶಿಬಿರುಗಳು, ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಸಮನ್ವಯವನ್ನು ಆಯೋಜಿಸುವುದು, ಸಂಘದ ಸಂವಹನ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುವುದು ನಿಮ್ಮ ಜವಾಬ್ದಾರಿ ಸಂಸ್ಥೆಯ ಹೃದಯ ಬಡಿತದಂತಿದೆ ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮವು ಪ್ರತಿ ಕಾರ್ಯಕ್ರಮ ಮತ್ತು ಪ್ರತಿಯೊಬ್ಬ ಆಟಗಾರ ಯಶಸ್ಸನ್ನು ರೂಪಿಸುತ್ತದೆ ನಿಮ್ಮ ಕೆಲಸವನ್ನು ಅಸೋಸಿಯೇಷನ್ ಆದ್ಯಂತ ಶಿಸ್ತು ಮತ್ತು ಏಕತೆಯನ್ನು ಪ್ರೇರೇಪಿಸಲಿ, ಪಕ್ಷ ಮತ್ತು ಸಕ್ರಿಯ ಸಂಘವನ್ನು ನಿರ್ಮಿಸುವ ನಿಮ್ಮ ಬದ್ಧತೆಯನ್ನು ನಾವು ನಂಬುತ್ತೇವೆ ಎಂದು ತಿಳಿಸಿದ್ದಾರೆ.
ವರದಿ ನಜೀರ ಚೋರಗಸ್ತಿ ತಾಳಿಕೋಟಿ



















