ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಮದುರ್ಗ ರೈಲ್ವೆ ಮಾರ್ಗಕ್ಕೆ ಒಗ್ಗಟ್ಟಾಗಿ ಹೋರಾಡಿ : ರೈಲ್ವೆ ಹೋರಾಟ ಸಮಿತಿ ಸದಸ್ಯ ಎಂ ಕೆ ಯಾದವಾಡ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಛೇರಿ ಹತ್ತಿರವಿರುವ ಪ್ರವಾಸಿ ಮಂದಿರದಲ್ಲಿ ರಾಮದುರ್ಗಕ್ಕೆ ನೂತನ ರೈಲ್ವೆ ಮಾರ್ಗ ನಿರ್ಮಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ನ್ಯಾಯವಾದಿ B U ಬೈರೇಕದಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ಹೋರಾಟದ ಪೂರ್ವಭಾವಿ ಸಭೆ ಜರಗಿತು.

ಈ ಪೂರ್ವಭಾವಿ ಸಭೆಯಲ್ಲಿ ರಾಮದುರ್ಗ ನೂತನ ರೈಲ್ವೆ ಮಾರ್ಗಕ್ಕೆ ರಾಮದುರ್ಗದ A R ಪಠಾಣ, D F ಹಾಜಿ, ಶಶಿಕಾಂತ್ ನೇಲ್ಲೂರ್ ,ಶಿವಾನಂದ ಮಿಲಾನಿ, ಶಿವಪ್ಪ ರಾಯಬಾಗ್ ತಮ್ಮ ಅಭಿಪ್ರಾಯ ತಿಳಿಸಿದರು.

ನಂತರ ಮಾತನಾಡಿದ ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡ ಎಂ ಕೆ ಯಾದವಾಡ, “ನಾವೆಲ್ಲರೂ ಸೇರಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ರಾಜ್ಯ ರೈಲ್ವೆ ಅಭಿವೃದ್ದಿ ಸಮಿತಿಯ ರಾಜ್ಯಾಧ್ಯಕ್ಷ ಕುತಬುದ್ದೀನ ಕಾಜಿ ಅವರ ನೇತೃತ್ವದಲ್ಲಿ ರಾಮದುರ್ಗದಲ್ಲಿ ಬೃಹತ್ ಹೋರಾಟ ಮಾಡಿದ್ದೇವೆ ಮತ್ತು ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದಲೂ ಹೋರಾಟ ಮಾಡಿದೇವೆ ಅದಕ್ಕೆ ನಾವು ಎಲ್ಲರೂ ಸೇರಿಕೊಂಡು ಒಂದೇ ಸಂಘಟನೆಯಡಿ ಹೋರಾಟ ಮಾಡಿದ್ರೆ ಮಾತ್ರ ನಮ್ಮ ಹೋರಾಟಕ್ಕೆ ಕಳೆ ಬರುವದು ನಾವು ಬೇರೆ ಬೇರೆ ಸಂಘಟನೆ ಹೆಸರಿನಲ್ಲಿ ಹೋರಾಟ ಮಾಡಿದರೆ ಒಗ್ಗಟ್ಟು ಇರುವುದಿಲ್ಲ ಈಗಾಗಲೇ ಸ್ಥಳೀಯ ಶಾಸಕರು ಹಾಗೂ ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಜಗದೀಶ್ ಶೆಟ್ಟರ್ ಮತ್ತು ರಾಜ್ಯ ರೈಲ್ವೆ ಮಂತ್ರಿ ವಿ ಸೋಮಣ್ಣ ಅವರಿಗೆ ಈಗಾಗಲೇ ಮನವಿ ಕೊಟ್ಟಿದ್ದೇವೆ ಇದರ ಫಲವಾಗಿ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರು 2017 ರಲ್ಲಿ ಆಗಿದ್ದ ಸಮೀಕ್ಷೆಯನ್ನು ಮರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ನ್ಯಾಯವಾದಿ ಬಿ ಯು ಬೈರೆಕದಾರ್ ಅವರು ಎಲ್ಲರ ಅಭಿಪ್ರಾಯ ಕೇಳಿ ನಂತರ ಮಾತನಾಡಿ “ನಾವೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಡಬೇಕಾಗಿದೆ, ನಾವೆಲ್ಲರೂ ಒಂದೇ. ಮನುಷ್ಯನಿಗೆ ಮೂಲಭೂತ ಸೌಲಭ್ಯದ ಬಗ್ಗೆ ಹೋರಾಟ ಮಾಡಬೇಕು ಇದು ನಮ್ಮ ಹಕ್ಕು . ನಾನು ಕಳೆದ ಹತ್ತು ವರ್ಷದಿಂದ ಕೂತಬುದ್ದಿನ ಕಾಜಿ ಜೊತೆಗೆ ಹೋರಾಟ ಮಾಡಿದ್ದೀನಿ ಅದಕ್ಕಾಗಿ ನಾವು ಈಗಾಗಲೇ ಉಪವಾಸ ಸತ್ಯಾಗ್ರಹಕ್ಕೆ ತೀರ್ಮಾನ ಮಾಡಿದ್ದೇವೆ.ಈ ತೀರ್ಮಾನದ ಭಾಗವಾಗಿ ಬರುವ ಆಗಷ್ಟ 11 ರಂದು ರಾಮದುರ್ಗ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳೋದು ಗ್ಯಾರಂಟಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ರಾಜು, ಪತ್ರಕರ್ತ ನೂರ್ ಅಕ್ಕೋಜಿ, ಕಾಶಿಮ್ ಪಡದಾರ್, ಶಶಿಕಾಂತ್ ನೇಲ್ಲೂರ್, ಸಿ ಎಸ್ ಹಿರೇಮಠ್, ಗಣೇಶ್ ಹೆಬ್ಬಾರ್ , ಮಂಜುನಾಥ್ ಮಾದರ ಸೇರಿ ಇನ್ನಿತರರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!