ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಸೋಮವಾರ (ದಿ. 4/7/2025) ರಂದು ಶ್ರಾವಣ ಮಾಸದ ಪ್ರವಚನದಲ್ಲಿ ತಾಳಿಕೋಟೆಯ ಶ್ರೀಗಳಾದ ಸಿದ್ದಲಿಂಗೇಶ್ವರ ಸ್ವಾಮೀಜಿಯವರು ಪ್ರವಚನದಲ್ಲಿ ” ಹಚ್ಚುವುದಾದರೆ ದೀಪ ಹಚ್ಚು ಬೆಂಕಿ ಹಚ್ಚಬೇಡ ಎಂದು ನೀನು ಎಷ್ಟೇ ಎತ್ತರಕ್ಕೆ ಬೆಳೆದರೂ ದೇವರ ಮುಂದೆ ಹೆತ್ತವರ ಮುಂದೆ ತಲೆ ಬಾಗಲೇಬೇಕು, ದೇವರ ಮನೆಯಲ್ಲಿ ಯಾವಾಗಲೂ ದೀಪವಿರಬೇಕು ದೇವರನ್ನು ನಂದಾ ದೀಪದಲ್ಲೇ ನೋಡಬೇಕು..ಸದಾ ದೇವರ ಮನೆಯಲ್ಲಿ ವಿದ್ಯುತ್ ದೀಪ ಢಾಳಾಗಿ ಹಚ್ಚಿಡಬಾರದು ಅಶಾಂತಿ ಇರುತ್ತದೆ ಮನೆಯಲ್ಲಿ…ನಂದಾದೀಪ” ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ..ನಂದಾದೀಪ ದೇವರ ಮನೆಯಲ್ಲಿ ಇದ್ದರೆ ಲಕ್ಷ್ಮೀ ಕಾಲು ಹೊರಗೆ ಹಾಕುವುದಿಲ್ಲ.. ಸದಾ ದೇವರ ಮುಂದೆ ದೀಪ ಇರಬೇಕು ಅದನ್ನು ನಂದದಂತೆ ನೋಡಿಕೊಳ್ಳಬೇಕು ಅದೇ ನಂದಾದೀಪ ಇದರಲ್ಲಿ ಲಕ್ಷ್ಮೀ ನಾರಾಯಣ ಸನ್ನಿಧಾನ ವಿರುತ್ತದೆ.. ಮನೆಯಲ್ಲಿ ಲಕ್ಷ್ಮೀ ವಾಸವಿರುತ್ತದೆ, “ನಂದಾದೀಪ”ಗಳನ್ನು ಪೂರ್ವದಿಕ್ಕಿನಲ್ಲಿ ಹಚ್ಚಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರಯುವುದು, ಮಾಟ, ಮಂತ್ರ ದೋಷ, ವಾಸ್ತುದೋಷ ನಿವಾರಣೆಯಾಗುತ್ತದೆ..ಮಕ್ಕಳ ಅಭಿವೃದ್ಧಿ ಆಗುತ್ತದೆ… ಪೂರ್ವ ಅಭಿವೃದ್ಧಿಯ ಸಂಕೇತ ವಾಗಿದೆ ಎಂದು ನುಡಿದರು.
ವರದಿ. ಆನಂದ್ ಹರಿಜನ




















