
ಕಲಬುರಗಿ ಜಿಲ್ಲೆ ಕಾಳಗಿಯ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ ರಟಕಲ್ ಗುಡ್ಡದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಪರ್ಯಂತ ಪುರಾಣ ಕಾರ್ಯಕ್ರಮ ನಡೆದು ಬರುತ್ತಿದ್ದು 11ನೇ ದಿನದ ಈ ಪುರಾಣ ಕಾರ್ಯಕ್ರಮದಲ್ಲಿ ವಿಶ್ವ ಜ್ಯೋತಿ ವಿಶ್ವರಾಧ್ಯರ ತೊಟ್ಟಿಲು ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮಕ್ಕೆ ನೂರಾರು ಮುತ್ತೈದೆಯರು ಆಗಮಿಸಿ ತೊಟ್ಟಿಲು ತೂಗುತ್ತಾ ಜೋಗುಳ ಪದ ಹಾಡಿದರು.
ರೇವಣಸಿದ್ದೇಶ್ವರರ ಭಕ್ತಾದಿಗಳು ದೂರ ದೂರದ ಹಳ್ಳಿಗಳಿಂದ ಆಗಮಿಸಿ ರೇವಣಸಿದ್ದೇಶ್ವರನ ದರ್ಶನ ಪಡೆದು ವಿಶ್ವಜ್ಯೋತಿ ವಿಶ್ವರಾಧ್ಯರ ಪುರಾಣವನ್ನು ಕೇಳಿ ಪುನೀತರಾದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿಕೊಂಡಿದ್ದ ಪರಮಪೂಜ್ಯ ಷಟ್ಪದಿ ಬ್ರಹ್ಮ ರೇವಣಸಿದ್ದ ಶಿವಾಚಾರ್ಯರ ರೇವಣಸಿದ್ದೇಶ್ವರ ಹಿರೇಮಠರಟಕಲ್ ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ನಾಗನಾಥ ತರ್ಗೆ ತಹಶೀಲ್ದಾರರು ಸೇಡಂ ಅವರು ವಹಿಸಿಕೊಂಡಿದ್ದರು.
ಪುರಾಣಿಕರಾದ ಮಹಾಲಿಂಗಯ್ಯ ಹಿರೇಮಠ ಪಡದಳ್ಳಿ ಮತ್ತು ಸಂಗೀತಗಾರರಾದ ಮಹಾದೇವಯ್ಯ ಸ್ವಾಮಿ ಎಂಪಳ್ಳಿ, ತಬಲಾ ವಾದಕರಾದ ಶಿವಕುಮಾರ ಸ್ವಾಮಿ ಉಡುಮನಹಳ್ಳಿ ಸೇರಿದಂತೆ ಎಲ್ಲರಿಂದ ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿ ಬರುತ್ತಾ ಇದೆ.
ಪುರಾಣ ಕಾರ್ಯಕ್ರಮದಲ್ಲಿ ರೇವಣಸಿದ್ದೇಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಸದಾಶಿವ ವಗ್ಗೆ, ನಾಗೇಶ್ ಬಿರಾದಾರ, ದೇವಸ್ಥಾನದ ಅರ್ಚಕರು ಹಾಗೂ ಸುತ್ತ ಮುತ್ತಲಿನ ಅನೇಕ ಗ್ರಾಮಗಳ ಭಕ್ತಾದಿಗಳು ಭಾಗಿಯಾಗಿದ್ದಾರೆ
ಈ ಕಾರ್ಯಕ್ರಮವನ್ನು ವೀರಣ್ಣ ಗಂಗಾಣಿ ರಟಕಲ್ ನಿರೂಪಿಸಿದರು.
ವರದಿ : ಚಂದ್ರಶೇಖರ್ ಆರ್. ಪಾಟೀಲ್



















