ಬಾಗಲಕೋಟೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕ ಹಿರಿಯ ಪತ್ರಕರ್ತರಾದ ದಿ. ಶ್ರೀಶೈಲ ಅಂಗಡಿ ಸ್ಮರಣಾರ್ಥ ನೀಡುವ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿ ಪುರಸ್ಕೃತರಾದ ಕಮತಗಿಯ ಪ್ರಕಾಶ ಗುಳೇದಗುಡ್ಡ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಈಚೆಗೆ ಬಾಲ್ಯದ ಗೆಳೆಯರು ಸನ್ಮಾನಿಸಿ ಗೌರವಿಸಿದರು.
ಸ್ನೇಹಿತರ ದಿನಾಚರಣೆ ದಿನವಾದ ಇಂದು ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಶೈಕ್ಷಣಿಕ ಗೆಳೆಯರು ಇಂದು ಸನ್ಮಾನ ಮಾಡಿದ್ದಾರೆ, ಎಲ್ಲಾ ಗೆಳೆಯರ ಪ್ರೀತಿ, ಹಾರೈಕೆಗೆ ಕೃತಜ್ಞತೆಗಳು, ಗೆಳೆಯರಾದ ವಿಜಯಕುಮಾರ (ಸಿದ್ದು) ಭಾಪ್ರಿ, ವಿನಾಯಕ ಐಹೊಳ್ಳಿ, ರವಿ ಇಲಾಳ, ಮಂಜುನಾಥ ತೋಟಗೇರ, ಮಂಜುನಾಥ ಭಾಪ್ರಿ, ವಿಜಯಕುಮಾರ ಭಾಪ್ರಿ, ಶೇಖರ್ ಕಡ್ಲಿಮಟ್ಟಿ, ಪಂಪಾಪತಿ ದಶಮನಿ, ರಮೇಶ ಭಜಂತ್ರಿ, ರಮೇಶ ಹಡಪದ, ಭೀಮಶಿ ಹಡಪದ, ಮಹಿಬೂಬ ಮಕಾನದಾರ, ಪ್ರಕಾಶ ಇಟಗಿ ಅವರು ನಾನು ಆರಾಧಿಸುವ ಕಮತಗಿ ಶ್ರೀ ಹುಚ್ಚೇಶ್ವರ ಮಠದ ಕೆಳಗಿನ ಗದ್ದುಗೆ ಶಿಲಾಮಂಟಪದಲ್ಲಿ ಸನ್ಮಾನ ಮಾಡಿ ಗೌರವಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅವರ ಗೆಳೆಯರು ಉಪಸ್ಥಿತರಿದ್ದರು.
- ಕರುನಾಡ ಕಂದ



















