ಬಾಗಲಕೋಟೆ :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕವು ಹಿರಿಯ ಪತ್ರಕರ್ತರಾದ ದಿ. ಶ್ರೀಶೈಲ ಅಂಗಡಿ ಸ್ಮರಣಾರ್ಥ ನೀಡುವ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿ ಪುರಸ್ಕೃತನಾದ ಹಿನ್ನಲೆಯಲ್ಲಿ ಕಮತಗಿಯ ಪ್ರಕಾಶ ಗುಳೇದಗುಡ್ಡ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಸಾಹಿತಿಗಳಾದ ಮಹದೇವ ಬಸರಕೋಡ, ಪತ್ರಕರ್ತ ಮಿತ್ರರಾದ ಹಸನಡೋಂಗ್ರಿ ಬೇಪಾರಿ ಅವರು ಸನ್ಮಾನಿಸಿದರು.
ಶ್ರೀ ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಹನಮಂತ ವಡ್ಡರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಎಫ್. ಎನ್. ಹುಲ್ಲಿಕೇರಿ, ವ್ಯವಸ್ಥಾಪಕರಾದ ರಮೇಶ್ ಪದಕಿಯವರು ಇದ್ದರು.
- ಕರುನಾಡ ಕಂದ




















