ಮುಸುಕಿದ ಚಂದಿರ
ಮುನಿಸಿನ ತೆರೆಯಲಿ
ಬಿಕ್ಕಳಿಸಿದ ಓಳಗೊಳಗೆ
ತನ್ನ ಗಡುವು ಮುಗಿಯಿತೆಂದು
ಒಂದು ದಿನ ಗೈರಾದ
ಒಡಲಾಳದ ನೋವು ನುಂಗಿ
ಮೋಡದ ಮರೆಯಲಿ
ಬೆಳಕಿನೊಂದಿಗೆ ತಕರಾರು ಮಾಡಿ
ಭಯಾನಕ ಕಥೆ ಹುದುಗಿ
ಆ ರಾತ್ರಿಯೊಳಗೆ
ಆತಂಕದ ಛಾಯೆಯಲಿ ತಾರೆಗಳು
ಚಡಪಡಿಕೆಯ ಹೊತ್ತು
ಆಗುಂತಕರ ಹಾವಳಿ
ಸಂಚಿನ ಮಂಜಲಿ
ತೊಳಲಾಟದ ಬೇಗೆ
ಬೆಳಕಿನ ಹಾಗೆ ಬೇಸತ್ತು
ನಾನಾ ಕಸರತ್ತುಗಳು
ಬಾನ ತೆರದ ಹರವಲಿ
ಮತ್ತೆ ಬರುವೆನೆಂಬ ಭರವಸೆಯಲಿ
ಬಿದಿಗೆ ಕಾಲದ ಆಡಿಯಲಿ.
- ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು.



















