ಬೆಂಗಳೂರು : ಮುಂಗಾರು ಮಳೆಯ ತಣ್ಣನೆಯ ವಾತಾವರಣದಲ್ಲಿ ಕೆಲದಿನಗಳಿಂದ ತಣ್ಣಗಿದ್ದ ರಾಜಕೀಯ ವಾಕ್ಸಮರ ಇಂದಿನಿಂದ ಕಾವೇರುವ ಸಾಧ್ಯತೆಯಿದೆ. ಯಾಕಂದರೆ, ಮಳೆಗಾಲದ ವಿಧಾಮಂಡಲ ಅಧಿವೇಶನ ಇಂದಿನಿಂದ ಶುರುವಾಗುತ್ತಿದೆ. ಎರಡು ವಾರಗಳ ಕಾಲ, ಅಂದರೆ ಆಗಸ್ಟ್ 22ವರೆಗೆ ಅಧಿವೇಶನ ನಡೆಯಲಿದ್ದು, ಪ್ರಮುಖವಾಗಿ ಈ ಬಾರಿ ಹತ್ತು ಹಲವು ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ (BJP), ಜೆಡಿಎಸ್ ಸಜ್ಜಾಗಿವೆ.
ಒಟ್ಟು 27 ವಿಧೇಯಕ ಮಂಡನೆಗೆ ಸರ್ಕಾರ ನಿರ್ಧಾರ
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ, ಬಾಲ್ಯ ವಿವಾಹ ತಿದ್ದುಪಡಿ ವಿಧೇಯಕ, ಫೇಕ್ ನ್ಯೂಸ್ ಮತ್ತು ತಪ್ಪು ಮಾಹಿತಿ ನಿರ್ಬಂಧಕ ವಿಧೇಯಕ, ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಸೇರಿ ಒಟ್ಟು 27 ವಿಧೇಯಕಗಳನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಮಂಗಳವಾರ ನಡೆಯುವ ಸದನ ಸಲಹಾ ಸಮಿತಿಯಲ್ಲಿ ಸರ್ಕಾರ ತರಲಿಚ್ಚಿಸುವ ವಿಧೇಯಕ ಪಟ್ಟಿಯನ್ನು ಸರ್ಕಾರ ಮಂಡಿಸಲಿದೆ.
ವರದಿ : ಜಿಲಾನಸಾಬ್ ಬಡಿಗೇರ್



















