ನೀನು ನನ್ನಲ್ಲಿ ಪ್ರೀತಿಯ ಭಿಕ್ಷೆಯ ಬೇಡಿದೆ
ನಾ ಮದುವೆಯಾಗಿ ಎರಡು ಮಕ್ಕಳ ಹಡೆದಿದ್ದೆ!
ಇತ್ತ ಗಂಡನ ಮನೆಗೆ ಕೆಲಸದ ಹಾಳಾಗಿದ್ದೆ
ಅತ್ತ ನಿನ್ನ ಮನಸಿನ ರಾಣಿಯಾಗಿ ಮೆರೆದೆ!!
ಯಾವ ಜನ್ಮದ ಋಣವೋ ನಾನು ಕಾಣೆ
ನಮ್ಮಿಬ್ಬರ ಅನುಬಂಧದ ಪ್ರೀತಿ ಮೇಲಾಣೆ!
ನಾ ಹುಟ್ಟಿದ್ದು ಎಲ್ಲೋ ಬೆಳೆದಿದ್ದು ಇನ್ನೆಲ್ಲೋ
ಬದುಕಿನ ದೋಣಿ ಸಾಗುವ ದಾರಿ ಮುಂದೆಲ್ಲೋ!!
ಒಡ ಹುಟ್ಟಿದವರಿಗೆ ಈಗ ನಾನು ಬೇಕಿಲ್ಲ
ಸಂಬಂಧವೆ ಇಲ್ಲದ ಜೀವಕ್ಕೆ ನಾನು ಬೇಕಲ್ಲ!
ನೀನೆ ನಾನೆಂದು ನನಗಾಗಿ ಕಾಯುತಿದೆಯಲ್ಲ
ನಾನೇನು ಮಾಡಲಿ ನನಗೊಂದು ಮನೆ ಇದೆಯಲ್ಲ!!
ನಿನ್ನ ಮನೆ ನನ್ನ ಮನೆ ಎಂದಿಗೂ ಆಗಲ್ಲ
ನನ್ನ ಮನೆಯವರಿಗೆ ನಾನು ಏನು ಅಲ್ಲ!
ನನಗೆ ಕುಟುಂಬವಿದೆ ಹೆಸರಿಗೆ ಉಸಿರಿಗಲ್ಲ
ಬೇರೆ ಒಲೆ ಹಚ್ಚಿ ಜೀವನ ಕಟ್ಟೋ ಆಸೆ ನನಗಿಲ್ಲ!!
ನೀ ನನ್ನ ಮರೆಯಬೇಕು ಹೊಸ ಚಿಗುರಿನಲಿ
ನನ್ನ ಹುಡುಕಾಟದ ಚಿಂತೆ ದೂರ ಕೈ ಬಿಡಲಿ
ಇರುವ ಹಾಗೆ ಇರದೇ ಜೀವಾ ಎಲ್ಲ ನಿನ್ನದಾಗಲಿ
ಸದಾ ನನ್ನ ಪ್ರೀತಿ ಹಾರೈಕೆ ನಿನ್ನ ಮೇಲೆ ಇರಲಿ!!
-ಕೆ.ಎಂ. ಕಾವ್ಯ ಪ್ರಸಾದ್, ಚಿಕ್ಕಬಳ್ಳಾಪುರ ಜಿಲ್ಲೆ.



















