ಅದೇಕೋ ಬಾನಿನ ಬೆಳಕು ಕಾಣೆಯಾಗಿತ್ತು
ಸೂರ್ಯ ಮೋಡದ ಮುಸುಕಿನಲ್ಲಿ ಎಲ್ಲೋ ಮಾಯವಾಗಿದ್ದ
ಕಪ್ಪು ಮೋಡ ದಟ್ಟಣೆ ಆವರಿಸಿತ್ತು
ಪ್ರಕೃತಿಯೇ ಮಬ್ಬಾಗಿ ಕಳೆಗುಂದಿತ್ತು
ತಂಪು ತಂಗಾಳಿ ಏಕೋ ಜೋರಾಗಿತ್ತು ಧರೆಯ ಬಿಸಿಗೆ ತಂಪೆರೆಯಲು ಅಂಬರ ಸಜ್ಜಾಗಿತ್ತು
ನೀಲಿ ಗಗನದಿ ಬಿತ್ತೊಂದು ಹನಿ ಭೂಮಿ ತಾಗಿ ಮಣ್ಣು ಕಂಪು ಸೂಸಿತು ಆ ಮಧುರ ವಾಸನೆ ಹೇಳಿತು ಮಳೆಗಾಲ ಆರಂಭದ ಮುನ್ಸೂಚನೆ ಇದು ವಾತಾವರಣ ಬದಲಾಗಿ ತಂಪಾಯ್ತು
ಭುವಿ ಮಳೆಗಾಲದ ಸಮಯದಲ್ಲಿ
ಕವಿದ ಮೊಡವ ಸರಿಸಿ ತೇಲಿ ಬಂದ ತಂಗಾಳಿ
ಧರೆಗೆ ಕಾವ ತಣಿಸಿ
ಜೀವ ಸಂಕುಲದ ಉಸಿರಾಗಿ ಶುರುವಾದ ಮುಂಗಾರು
ಹಸಿರಿಗೆ ಜೀವವಾಗಿ ಹೂ ದುಂಬಿಗೆ ಸಂತಸವಾಗಿ ಮನಕೆ ತಂಪಾಗಿ ಬೀಸಿದೆ…
- ಮಾನಸ ಜೀವನ್



















