ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಂಥಾಲಯ ಸಮಾಜದ ಪ್ರಗತಿಗೆ ಸೂಚಕ : ರಾಖೇಶ ಬೂದಿಹಾಳ

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸ್ವಾತಂತ್ರ್ಯ ಯೋಧರ ನಾಡು ಕೊಗನೂರಿನಲ್ಲಿ ಡಾ. ಎಸ್. ಆರ್. ರಂಗನಾಥನ್ ರವರ 133 ನೇ ಜನ್ಮ ದಿನದ ಪ್ರಯುಕ್ತ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು, ಈ ಕಾರ್ಯಕ್ರಮವನ್ನು ಗ್ರಾಮದ ಗ್ರಂಥಪಾಲಕರಾದ ಶೇಖಪ್ಪ ಚೂರಿ ರವರು ಸಂಯೋಜಿಸಿದ್ದು. ಈ ಕಾರ್ಯಕ್ರಮಕ್ಕೆ ಕೋಗನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ‘ಶರಣಪ್ಪ ಮುದ್ದಿ’ ಹಾಗೂ ನಿವೃತ್ತ ಶಿಕ್ಷಕರಾದ ಹಾಲಪ್ಪ ಕೆಂಗುಡ್ಡಪ್ಪನವರ, ಮಾಜಿ ಗ್ರಾ. ಪಂ ಬಸವರಾಜ್ ಭರಮಣ್ಣನವರ, ಕುಮಾರ್ ಕಬೇರಳ್ಳಿ, ರವಿ ಮಟ್ಟಿ. ಶರಣಪ್ಪ ಚನ್ನೂರ ಮತ್ತು ತಂಗೋಡ ಗ್ರಾಮದ ಗ್ರಂಥಪಾಲಕರಾದ ಕೆಂಚಮ್ಮ ಚೂರಿ, ಕಿರಣ್ ಚನ್ನೂರ ಇತರರು ಕೂಡ ಉಪಸ್ಥಿತರಿದ್ದು, ಈ ಒಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ.ಎಸ್. ಆರ್ ರಂಗನಾಥ್ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು, ಪೂರಕವಾಗಿ ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತರಾದ ರಾಕೇಶ ಬೂದಿಹಾಳ್ ರವರು ಡಾ, ಎಸ್.ಆರ್. ರಂಗನಾಥ ರವರ ಕಿರು ಪರಿಚಯದ ಜೊತೆಗೆ ಗ್ರಂಥಾಲಯದ ಉಪಯುಕ್ತತೆ ಮತ್ತು ಬಳಕೆಯ ಬಗ್ಗೆ ಕೆಲವು ಕಿರು ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಗ್ರಂಥಾಲಯವು ಸಮಾಜದ ಪ್ರಗತಿಯ ಸೂಚಕವಾಗಿದೆ ಎಂದರು. ನಂತರ ಇನ್ನುಳಿದ ಹಿರಿಯರು ಕೂಡ ವೈಚಾರಿಕವಾಗಿ ಗ್ರಂಥಾಲಯದ ಮಹತ್ವದ ಬಗ್ಗೆ ಮಾತನಾಡಿದರು. ಕೊನೆಗೆ ಸಿಹಿ ಹಂಚುವುದರ ಮುಖಾಂತರ ಕಾರ್ಯಕ್ರಮವು ಯಶಸ್ವಿಯಾಗಿ ಕೊನೆಗೊಂಡಿತು.

ವರದಿಗಾರರು : ರಾಖೇಶ್ ಬೂದಿಹಾಳ, ಶಿರಹಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!