ಕರ್ನಾಟಕ ಬೆಳೆ ಸಮೀಕ್ಷೆಗಾರರ ಸಂಘ ರಿ. ಬೆಳಗಾವಿ ಜಿಲ್ಲಾ ಘಟಕದಿಂದ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ನಮ್ಮ ಸಮಸ್ಯೆಗಳು, ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ಬೆಳಗಾವಿ: ಇವತ್ತಿನ ದಿನ ಜಿಲ್ಲಾ ಅಧ್ಯಕ್ಷರ ಮುಂದಾಳತ್ವದಲ್ಲಿ ಬೆಳಗಾವಿ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರಾದ ಹೆಚ್. ಡಿ. ಕೋಳೆಕರ ಅವರನ್ನು ಭೇಟಿಯಾಗಿ ಬೆಳೆ ಸಮೀಕ್ಷೆಗಾರರ ವಿವಿಧ ಬೇಡಿಕೆಗಳು ಹಾಗೂ ಸುರಕ್ಷತೆ ದೃಷ್ಟಿಯಿಂದ ಸಮೀಕ್ಷೆ ಅವಧಿಯಲ್ಲಿ ನಾವು ಅನುಭವಿಸುವ ತೊಂದರೆಗಳಿಗೆ ಕೃಷಿ ಇಲಾಖೆ ವತಿಯಿಂದ ತೆಗೆದುಕೊಳ್ಳುವ ಕ್ರಮಗಳನ್ನು ಸುಧೀರ್ಘವಾಗಿ ಚರ್ಚೆ ಮಾಡಲಾಯಿತು.
ಬೆಳೆ ಸಮೀಕ್ಷೆಗಾರರ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಈ ವಿಷಯದ ಕುರಿತಾಗಿ ಚರ್ಚಿಸಿ ಸಾಧ್ಯವಾದಷ್ಟು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಅದೇ ರೀತಿ ಮುಂದುವರೆದು ಬೆಳೆ ಸಮೀಕ್ಷೆ ಕುರಿತಾಗಿ ಮಾತನಾಡಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತಮ್ಮ ಪಾತ್ರ ಮಹತ್ವದಾಗಿದ್ದು, ರೈತರ ಜಮೀನಿನ ಬೆಳೆ ದತ್ತಾಂಶ ಸಂಗ್ರಹಿಸುವಲ್ಲಿ ಕೆಲವು ಸಮೀಕ್ಷೆಗಾರರು ಬೇಜವಾಬ್ದಾರಿತನ ತೋರಿದ್ದು ಕಂಡು ಬಂದಿದ್ದು ಅಂತವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ವಹಿಸುವುದಾಗಿ ಖಾರವಾಗಿ ಪ್ರತಿಕ್ರಿಯಿಸಿ ಕಠಿಣ ಎಚ್ಚರಿಕೆ ನೀಡಿದರು.
ಬರುವ ದಿನಗಳಲ್ಲಿ ಬೆಳೆ ಸಮೀಕ್ಷೆ ಜೊತೆಗೆ ವಿವಿಧ ಕೆಲಸಗಳನ್ನು ನಿರ್ವಹಿಸಲು ಗ್ರಾಮ ಪಂಚಾಯತಿಗೆ ಒಬ್ಬರನ್ನು ವಾರ್ಷಿಕ ಸಂಬಳದಡಿ ನಿಯೋಜನೆ ಮಾಡುವ ಯೋಚನೆ ಇದ್ದು ಆದಷ್ಟು ಬೇಗ ಕ್ರಮವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಅಧ್ಯಕ್ಷರು ಕುಮಾರ ಸುಳಗೇಕರ ,ಕಾರ್ಯದರ್ಶಿ ದಯಾನಂದ , ಮಂಜುನಾಥ, ವಿಠ್ಠಲ, ಜಿಲ್ಲಾ ಪದಾಧಿಕಾರಿಗಳು, ಖಾನಾಪುರ, ಬೈಲಹೊಂಗಲ, ಕಿತ್ತೂರು, ಯರಗಟ್ಟಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
- ಕರುನಾಡ ಕಂದ



















