ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಹ್ಯಾದ್ರಿ ಸಂಸ್ಥೆಗೆ ಈ ಬಾರಿಯೂ ನಿರೀಕ್ಷೆಗೂ ಮೀರಿ ರೂ. 11 ಕೋಟಿ ಅಧಿಕ ಲಾಭ

ವಿಜಯದೇವ್ ನಾಯಕತ್ವಕ್ಕೆ ಮತ್ತೊಂದು ಗರಿಮೆ..

ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಸುಮಾರು 2 ದಶಕಗಳ ಹಿಂದೆ ಸಹಕಾರಿ ಧುರೀಣ-ರತ್ನ ಶ್ರೀ ಬಸವಾನಿ ವಿಜಯದೇವ್ ರವರ ಸಾರಥ್ಯದಲ್ಲಿ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಮತ್ತು ಜನರಿಗೆ ಸ್ಥಳೀಯವಾಗಿಯೇ ಹಣಕಾಸು ಸಕಾಲಕ್ಕೆ ಒದಗಬೇಕೆಂಬ ದೂರ ದೃಷ್ಟಿ ಮತ್ತು ಅಚಲ ನಂಬಿಕೆಯಿಂದ ಪ್ರಾರಂಭಗೊಂಡ ಸಹ್ಯಾದ್ರಿ ವಿವಿದ್ದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ , ವಿ. ಸಂಘವು ಆಡಿಟ್ ವರದಿಯಲ್ಲಿ ಕಳೆದ ಸಾಲಿನಲ್ಲಿಯೂ ‘ಎ’ ಶ್ರೇಣಿಯನ್ನು ಪಡೆದುಕೊಂಡಿದ್ದು, ಜಿಲ್ಲೆಯಲ್ಲಿಯೇ ಒಂದು ಸದೃಡ ಸಹಕಾರ ಸಂಘವಾಗಿ ಬೆಳೆದಿದ್ದು, ಆ ಕಾಲದಲ್ಲಿ ಈ ಸಂಘದ ಬಗ್ಗೆ ಅಸಡ್ಡೆಯಾಗಿ ಮಾತಾನಾಡಿದವರ ಎದುರು ಬಸವಾನಿ ವಿಜಯದೇವ್ ರವರ ದೂರದೃಷ್ಟಿ, ಶಿಸ್ತು ಬದ್ದ ಆಡಳಿತ ನೀತಿ, ಕಠಿಣ ನಿಲುವು, ನಿರ್ದಾಕ್ಷಿಣ್ಯ ಸಾಲ ವಸೂಲಾತಿ ಕ್ರಮದಿಂದ ಈ ಸಂಘವು ಪ್ರತಿ ವರ್ಷದಂತೆ ಈ ವರ್ಷವು 11 ಕೋಟಿ 64 ಲಕ್ಷದ 11 ಸಾವಿರದ 745 ರೂಪಾಯಿಗಳ ಲಾಭವನ್ನು ಗಳಿಸಿದ್ದು, ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ. ಸಹ್ಯಾದ್ರಿ ಸಂಸ್ಥೆಯ ಎಲ್ಲಾ ವಿಭಾಗದ ಒಟ್ಟು ವ್ಯವಹಾರವು 1475 ಕೋಟಿಗೂ ಅಧಿಕವಾಗಿದ್ದು, ಸಂಘವು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಬಲವಾಗಿರುವಂತೆ ಮಾಡಲು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬೆಲೆ ಬಾಳುವ ನಿವೇಶನಗಳನ್ನು ಕೊಂಡುಕೊಂಡಿದ್ದು, ಅವುಗಳ ಮಾರುಕಟ್ಟೆ ಮೌಲ್ಯವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಸಂಸ್ಥೆಯ ಈ ಜಾಗಗಳ ಪ್ರಸಕ್ತ ಮಾರುಕಟ್ಟೆ ಮೌಲ್ಯವು ಸುಮಾರು 72 ಕೋಟಿಗೂ ಅಧಿಕವಾಗಿದೆ. ಅದರಂತೆ ಸಂಸ್ಥೆಯು ಗ್ರಾಹಕರ ಮೆಚ್ಚಿಗೆಯನ್ನು ಗಳಿಸಿದ್ದು, ಸುಮಾರು 104 ಕೋಟಿ 54 ಲಕ್ಷದ ಠೇವಣಿಯನ್ನು ಹೊಂದಿದ್ದು, ತನ್ನ ವ್ಯವಹಾರದ ಕಾರ್ಯವ್ಯಾಪ್ತಿಯನ್ನು ಕಲಬುರಗಿ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ. ಈಗಾಗಲೇ ಸುಮಾರು 140 ಕೋಟಿಗೂ ಅಧಿಕ ಸಾಲವನ್ನು ನೀಡಿದ್ದು, ಈ ವರ್ಷವೂ ಸಾಲ ವಸೂಲಾತಿ ವಿಷಯದಲ್ಲಿ ಶೇಕಡ 77% ಪ್ರಗತಿಯನ್ನು ಹೊಂದಿದೆ. ಅದರಂತೆ ಸಂಸ್ಥೆಯ ಮೇಲೆ ವಿಶ್ವಾಸವಿರುಸಿರುವ ಷೇರುದಾರ ಸದಸ್ಯರ ಹಿತವನ್ನು ದೃಷ್ಟಿಯಾಗಿರಿಸಿಕೊಂಡು ವಿವಿಧ ಕಡೆಗಳಲ್ಲಿ ಸುಮಾರು 48 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದು, ಪ್ರತಿ ವರ್ಷವೂ ಲಾಭವನ್ನು ಗಳಿಸುತ್ತ ತನ್ನ ಸದಸ್ಯರಿಗೆ ಲಾಭಾಂಶವನ್ನು ಹಂಚುತ್ತಾ ತನ್ನ ಹಿರಿಮೆಯನ್ನು ಉಳಿಸಿಕೊಂಡಿದೆ.

➡ಅಡಿಕೆ ವ್ಯವಹಾರದಲ್ಲಿ ರೂ.7.89 ಕೋಟಿ ಲಾಭ…

ಸಹ್ಯಾದ್ರಿ ಸಂಸ್ಥೆಯಲ್ಲಿ ಅಡಿಕೆ ವ್ಯವಹಾರವೇ ಉತ್ತಮ ಲಾಭವನ್ನು ತಂದು ಕೊಡುವ ಪ್ರಮುಖ ವ್ಯವಹಾರವಾಗಿರುತ್ತದೆ. ಸಂಸ್ಥೆಯಲ್ಲಿ ಸುಸರ್ಜಿತವಾದ ಗೋದಾಮುಗಳನ್ನು ಹೊಂದಿದ್ದು, ರೈತರ ಅಡಿಕೆ ಮೂಟೆಗಳನ್ನು ಸುರಕ್ಷಿತವಾಗಿ ಕಾಪಾಡಲಾಗುವುದು. ಉತ್ತಮ ಗುಣಮಟ್ಟದ ಸುಣ್ಣ, ಮೈಲು ತುತ್ತಾ, ರಾಳ ಹಾಗೂ ಕೃಷಿ ಉಪಯೋಗಿ ಔಷಧಿಗಳನ್ನು ಮಾರಾಟ ಕೂಡಾ ಮಾಡುತ್ತಿದೆ. ಒಟ್ಟಾರೆಯಾಗಿ ಅಡಿಕೆ ವ್ಯವಹಾರದಿಂದ ಬಂದ ಕಮೀಷನ್ ಔಷಧಿ ವ್ಯಾಪಾರದಿಂದ ಹಾಗೂ ಸಂಸ್ಥೆಯಿಂದ ಷೇರುದಾರರು ವಿವಿಧ ಉದ್ದೇಶಗಳಿಗಾಗಿ ಪಡೆದ ಸಾಲಗಳ ಮೇಲಿನ ಬಡ್ಡಿಯಿಂದ ಬಂದ ಲಾಭ ಅಂದಾಜು 7 ಕೋಟಿ 89 ಲಕ್ಷದ 35 ಸಾವಿರದ 577 ರೂಪಾಯಿ

ಚೀಟಿನಿಧಿ ವಿಭಾಗದಲ್ಲಿ 3 ಕೋಟಿಗೂ ಅಧಿಕ ಲಾಭ

2015 ರಲ್ಲಿ ಪ್ರಾರಂಭಗೊಂಡ ಸಹ್ಯಾದ್ರಿ ಚೀಟಿನಿಧಿಯು, ಷೇರುದಾರರು ಮತ್ತು ತನ್ನ ಎಲ್ಲಾ ಚಂದಾದಾರರ ವಿಶ್ವಾಸವನ್ನು ಗಳಿಸಿ, ಸಂಸ್ಥೆಯ ಮತ್ತೊಂದು ಲಾಭಾ ತರುವ ವಿಭಾಗವಾಗಿ ಬೆಳೆದಿರುವುದು ” ಸಹ್ಯಾದ್ರಿ ಚೀಟಿನಿಧಿ ” ಈಗಾಗಲೇ ಒಟ್ಟು 106 ಗುಂಪುಗಳನ್ನು ಪ್ರಾರಂಭಿಸಿದ್ದು, ಸುಮಾರು 4250 ಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು, ಚೀಟಿನಿಧಿಯಲ್ಲಿ ತೊಡಗಿಸಿಕೊಂಡ ಮೇಲೆ ಮನೆಯ ಶುಭ ಕಾರ್ಯ, ಮಕ್ಕಳ ವಿದ್ಯಾಭ್ಯಾಸ, ಮದುವೆ. ಆಸ್ತಿ ಮತ್ತು ಇನ್ನಿತರ ಆರ್ಥಿಕ ವ್ಯವಹಾರಗಳಿಗೆ ಚಂದಾದಾರರಿಗೆ ಅನುಕೂಲವಾಗಿರುತ್ತದೆ. ಒಟ್ಟಾರೆಯಾಗಿ ಈ ಸಾಲಿನಲ್ಲಿ ಸುಮಾರು 3 ಕೋಟಿ 12 ಲಕ್ಷದ 3 ಸಾವಿರದ 402 ರೂಪಾಯಿ ಅಧಿಕ ಲಾಭಂಶ ಗಳಿಸಿದೆ.

ಸಹ್ಯಾದ್ರಿ ಫ್ಯುಯಲ್ಸ್ ನಲ್ಲಿ 40 ಲಕ್ಷಕ್ಕೂ ಅಧಿಕ ಲಾಭ..

ಸಹ್ಯಾದ್ರಿ ಸಂಸ್ಥೆಯ ಪೋಷಣೆಯಿಂದ ಹೆಮ್ಮರವಾಗಿ ಬೆಳೆಯುತ್ತಿರುವ, ಸಾರ್ವಜನಿಕರ ಹೆಗ್ಗಳಿಕೆ ಪಾತ್ರವಾಗಿರುವ ಸಹ್ಯಾದ್ರಿ ಫ್ಲೋಯಲ್ಸ್ ಗ್ರಾಹಕರಿಗೆ ದಿನದ 24 ಗಂಟೆಯ ಉತ್ತಮ ಸೇವೆಯ ಜೊತೆಗೆ ಗುಣಮಟ್ಟದ ಪೆಟ್ರೋಲ್, ಡಿಸೇಲ್ ಮತ್ತು ಆಯಿಲ್ ಒದಗಿಸುತ್ತಿದ್ದು, ಗ್ರಾಹಕರು ಈ ಬಂಕ್ ಬಗ್ಗೆ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿನಲ್ಲಿ ಪೆಟ್ರೋಲ್ ಬಂಕ್ 40 ಲಕ್ಷದ 33 ಸಾವಿರದ 715 ರೂಪಾಯಿ ಲಾಭವಾಗಿರುತ್ತದೆ.

ನಂದಿನಿ ಮಿಲ್ಕ್ ಪಾರ್ಲರ್ ಮತ್ತು ಎಮಿಷನ್ ಟೆಸ್ಟ್ : 6.30 ಲಕ್ಷ ಲಾಭ

ಸಹ್ಯಾದ್ರಿ ಪೆಟ್ರೋಲ್ ಬಂಕ್ ಅವರಣದಲ್ಲಿಯೇ ಪ್ರಾರಂಭವಾಗಿರುವ ಕೆ. ಎಂ. ಎಫ್. ಉತ್ಪನ್ನಗಳಾದ ತಾಜಾ ಹಾಲು,ಮೊಸರು,ತುಪ್ಪ, ಸಿಹಿ ತಿನಿಸುಗಳಾದ ಪೇಡ,ತಿಂಡಿ ತಿನಿಸುಗಳನ್ನು ದಿನದ 24 ಗಂಟೆಯೂ ಸೇವೆಯನ್ನು ಒದಗಿಸಲು ಮಳಿಗೆಯನ್ನು ಪ್ರಾರಂಭಿಸಿದ್ದು, ಈ ಸಾಲಿನಲ್ಲಿ ಒಟ್ಟು 6 ಲಕ್ಷದ 38 ಸಾವಿರದ 252 ರೂಪಾಯಿ ಲಾಭವನ್ನು ಗಳಿಸಿರುತ್ತದೆ.

ಸರ್ವೋ ಇಂಡಿಯನ್ ಆಯಿಲ್ 7.70 ಲಕ್ಷ ಲಾಭ

ದೇಶದ ಪ್ರತಿಷ್ಟಿತ ಸರ್ವೋ ಇಂಡಿಯನ್ ಆಯಿಲ್ ಸಂಸ್ಥೆಯು ತನ್ನ ಉತ್ಪಾದನೆಗೆ ಅಧಿಕ ಬೇಡಿಕೆ ಇರುವ ಕಾರಣ ಶಿವಮೊಗ್ಗ ಜಿಲ್ಲೆಗೆ ನೀಡುವ ಏಜೆನ್ಸಿಯನ್ನು ಸಹ್ಯಾದ್ರಿ ಸಂಸ್ಥೆಯು ಪಡೆದುಕೊಂಡಿದ್ದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ಗರಿ. ಗ್ರಾಹಕರಿಗೆ ಉತ್ತಮ ಆಯಿಲ್ ಒದಗಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದ್ದು, ಈ ಸಾಲಿನಲ್ಲಿ 7 ಲಕ್ಷದ 71 ಸಾವಿರದ 319 ರೂಪಾಯಿಗಳ ಲಾಭವನ್ನು ಪಡೆದಿರುತ್ತದೆ.

ಸಹ್ಯಾದ್ರಿ ವಾಟರ್ ಪ್ಲಾಂಟ್ 8.29 ಲಕ್ಷ ಲಾಭ

ಸಂಸ್ಥೆಯ ಹೆಸರಿನಲ್ಲಿ ಶುದ್ಧ ಕುಡಿಯುವ ನೀರನ್ನು ಜನತೆಗೆ ಒದಗಿಸುವ ಸಲುವಾಗಿ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಘಟಕವನ್ನು ಕೊಂಡುಕೊಂಡು ಸಹ್ಯಾದ್ರಿ ಕುಡಿಯುವ ನೀರು ಎಂಬ ಹೆಸರಿನೊಂದಿಗೆ ವ್ಯವಹಾರವನ್ನು ನಡೆಸುತ್ತಿದ್ದು, ತಾಲ್ಲೂಕಿನಿಂದ ತಾಲ್ಲೂಕುಗಳಿಗೆ ಹಬ್ಬುತ್ತಿದ್ದು, ಸಹ್ಯಾದ್ರಿ ಕುಡಿಯುವ ನೀರಿಗೆ ಅಧಿಕ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅದರಂತೆ ಈ ಸಾಲಿನ ತನ್ನ ವ್ಯವಹಾರದಲ್ಲಿ 8 ಲಕ್ಷದ 29 ಸಾವಿರದ 480 ರೂಪಾಯಿಗಳ ಲಾಭವನ್ನು ತನ್ನದಾಗಿಸಿಕೊಂಡಿದೆ.

ಸಹಕಾರದನಿ ವಾರ ಪತ್ರಿಕೆ

2011 ರ ಹೊತ್ತಿಗೆ ಪ್ರಾರಂಭಗೊಂಡ ಸಹಕಾರದನಿ ವಾರಪತ್ರಿಕೆ ಷೇರುದಾರರಿಗೆ ಸಂಸ್ಥೆಯ ಚಟುವಟಿಕೆ ಹಾಗೂ ರಾಜ್ಯದ ಇನ್ನಿತರೆ ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತಿದ್ದು, ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಗಳಿಸಿ ಹೆಮ್ಮೆಯ ವಾರಪತ್ರಿಕೆಯಾಗಿ ಹೊರಹೊಮ್ಮಿರುತ್ತದೆ.

ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಅಧ್ಯಕ್ಷ ಶ್ರೀ ಬಸವಾನಿ ವಿಜಯದೇವ್‌…

” ಸಹ್ಯಾದ್ರಿ ಸಂಸ್ಥೆಯು ಜನರ ಮತ್ತು ಷೇರುದಾರರ ವಿಶ್ವಾಸ ಮತ್ತು ನಂಬಿಕೆಯಿಂದ ಈ ಬಾರಿ ನಿರೀಕ್ಷೆಗೂ ಮೀರಿ ಲಾಭಗಳಿಸಿದ್ದು, ಇದೆಲ್ಲವೂ ನನ್ನಿಂದಲೇ ಆಗಿದೆ ಎಂದು ಹೇಳಲಾರೆ. ನಮ್ಮ ಸಂಸ್ಥೆಗೆ ಮೊದಲಿನಂದಲೂ ಸಹಕಾರ ಮತ್ತು ಸಲಹೆಯನ್ನು ನೀಡುತ್ತಾ ಬಂದಿರುವ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಆರ್. ಎಮ್. ಮಂಜುನಾಥ ಗೌಡ ರವರಿಗೆ ನಮ್ಮ ಕ್ಷೇತ್ರದ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ರವರಿಗೂ, ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್ ರವರಿಗೂ, ಸಹಕಾರ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಹಾಗೂ ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಚಂದ್ರಕಲಾ ರವರ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸಂಸ್ಥೆ ತನ್ನದೆಂಬ ಭಾವನೆಯಿಂದ ಶ್ರಮವಹಿಸಿ ದುಡಿಯುತ್ತಿರುವ ಸಿಬ್ಬಂದಿ ವರ್ಗ ಹಾಗೂ ಸಕಾಲದಲ್ಲಿ ಸೂಕ್ತ ಸಲಹೆ ಸಹಕಾರವನ್ನು ನೀಡುತ್ತಿರುವ ಸಂಸ್ಥೆಯ ನಿರ್ದೇಶಕರುಗಳು ಕಾರಣೀಕರ್ತರಾಗಿರುತ್ತಾರೆ. ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಇವರೆಲ್ಲರಿಗೂ ಕೃತಜ್ಞತೆ ಹಾಗೂ ಧನ್ಯವಾದ ಸಲ್ಲಿಸುತ್ತಿದ್ದೇನೆ ” ಎಂದು ಮಾಧ್ಯಮ ಮಿತ್ರರೊಂದಿಗೆ ಸಂತೋಷದಿಂದ ಹಂಚಿಕೊಂಡರು.

ವರದಿ ಪ್ರಸಾದ್ ಹೆಚ್ ಬಿ ತೀರ್ಥಹಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!