ಕಾಲದ ಗಾಳಿ ತಂದುಕೊಟ್ಟಿದೆ ನಾಳೆಯ ಹೊನಲು,
ತ್ರಿವರ್ಣ ಧ್ವಜದ ಹೊಳೆಯಲಿ ಹೊಮ್ಮಿದೆ ಕಿರಣ,
ರಕ್ತದ ಹನಿಯಲ್ಲಿ ಬರೆದಿದೆ ಹೋರಾಟದ ಕಥೆ,
ಶೌರ್ಯದ ಶಿಲೆಯಲ್ಲಿ ಮೊಳಗಿದೆ ಜಯಘೋಷದ ಧ್ವನಿ.
ಆಕಾಶದಲಿ ನೃತ್ಯಿಸುವ ತ್ರಿವರ್ಣ ಪತಾಕೆ,
ಗಾಳಿಯಲಿ ತೇಲುವದು ಅಹಂಕಾರವಲ್ಲ — ಗೌರವ,
ನೂರಾರು ತಾಯಿಯರ ಕಣ್ಣೀರ ಮುತ್ತು,
ಅನೇಕ ಹೋರಾಟಗಾರರ ತ್ಯಾಗದ ಹೂವು.
ಕನ್ನಡನಾಡಿನ ಹೊಲದ ಹಸಿರು ಪರಿಮಳ,
ಗಂಗೆಯ ತೀರದ ಭಕ್ತಿ ನಾದ,
ಹಿಮಾಲಯದ ಶಿಖರದ ತಂಪು ತೇಲು,
ಎಲ್ಲವೂ ಒಂದೇ ಮಾತು ಸಾರುತ್ತದೆ —
“ಇದು ನಮ್ಮ ಭಾರತ, ಇದು ನಮ್ಮ ಮನ.”
ಭಾಷೆಯ ಗಡಿಗಳನ್ನು ಮೀರಿ ಹೃದಯಗಳನ್ನು ಜೋಡಿಸಿ,
ಸಂಸ್ಕೃತಿಯ ಗಾಢ ಬಣ್ಣಗಳಿಂದ ನಾಡನ್ನು ಅಲಂಕರಿಸಿ,
ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಇಂದೇ
ಏಕಸ್ವರದಲ್ಲಿ ಹಾಡಲಿ —
“ವಂದೇ ಮಾತರಂ!”
ಪತ್ರಕರ್ತನಾಗಿ ಬರೆದ ಪ್ರತಿಯೊಂದೂ ಪದ,
ಸತ್ಯದ ಹಾದಿಯಲ್ಲಿ ಬೆಳಕು ಹಚ್ಚಲಿ,
ಪ್ರಗತಿಯ ಹೆಜ್ಜೆಗೂ ಏಕತೆಯ ನಾದವೂ
ನಮ್ಮ ಲೇಖನದ ಹೃದಯವಾಗಲಿ.
ಸ್ವಾತಂತ್ರ್ಯ ದಿನದ ಹಾರ್ಧಿಕ ಶುಭಾಶಯ,
ಭಾರತವೆಂಬ ಮನೆ ಸದಾ ಬೆಳಗಲಿ,
ಕನ್ನಡ ನಾಡು ಸದಾ ಹೆಮ್ಮೆ ಪಡಲಿ,
ತ್ರಿವರ್ಣ ಧ್ವಜ ಸದಾ ಆಕಾಶ ಮುಟ್ಟಲಿ.
ರಚನೆ : ಶಿವರಾಜ ಸಾಹುಕಾರ್ ವಡಗೇರಾ,
ಪತ್ರಕರ್ತರು



















