ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಆಯ್ಕೆ

ಕಲಬುರಗಿ :ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ.) ಯ ಕಲ್ಬುರ್ಗಿ ಜಿಲ್ಲೆಯ ಉಪಾಧ್ಯಕ್ಷರಾಗಿ ಶ್ರೀ ಶಿವಕುಮಾರ ಪಾಟೀಲ್ ಹೇರೂರು ಮತ್ತು ಶ್ರೀ ಮಲ್ಲಿನಾಥ್ ಶಿವರಾಯ ಪಾಟೀಲ್ ಹುಳಗೇರಾ ಇವರನ್ನು ಕಾಳಗಿ ತಾಲೂಕಿನ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಕರ್ನಾಟಕ ರಾಜ್ಯ ರೈತರ ಉಳಿಗಾಗಿ ಹಾಗೂ ಅಭಿವೃದ್ಧಿಗಾಗಿ ಸ್ವಾಭಿಮಾನಿ ರೈತರ ರಕ್ಷಣೆಗಾಗಿ ಉದಯವಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷರಾದ ಎಚ್ ಆರ್ ಬಸವರಾಜಪ್ಪ ಮತ್ತು ಸೋಮನಗೌಡ ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಇವರಗಳ ಆದೇಶದ ಮೇರೆಗೆ ಶ್ರೀಮಾನ ಶಿವರಾಜ ಪಾಟೀಲ್ ಗೋಣಿಗಿ ಕಲಬುರ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಉಪಾಧ್ಯಕ್ಷರಾಗಿ ಶ್ರೀ ಶಿವಕುಮಾರ ಪಾಟೀಲ್ ಹೇರೂರು ಮತ್ತು ಶ್ರೀ ಮಲ್ಲಿನಾಥ್ ತಂದೆ ಶಿವರಾಯ ಪಾಟೀಲ್ ಹುಳಗೇರಾ ಇವರನ್ನು ಕಾಳಗಿ ತಾಲೂಕಿನ ಉಪಾಧ್ಯಕ್ಷರಾಗಿ ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಶಿವರಾಜ ಪಾಟೀಲ್ ಗೋಣಗಿ ತಿಳಿಸಿರುತ್ತಾರೆ. ಇಂದಿನಿಂದಲೇ ನೀಡುವ ಹುದ್ದೆಯನ್ನು ಜವಾಬ್ದಾರಿಯಿಂದ ಕಲಬುರ್ಗಿ ಜಿಲ್ಲೆ ಉಪಾಧ್ಯಕ್ಷರಾಗಿ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸಿಕೊಂಡು ಇಲ್ಲಿ ಇರುವಂತಹ ಸಮಸ್ಯೆಗಳನ್ನು ತೆಗೆದುಕೊಂಡು ನ್ಯಾಯ ಬದ್ಧ ಸಂವಿಧಾನ ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಿವಕುಮಾರ ಪಾಟೀಲ್ ಹೇಳಿದರು. ಹತ್ತಾರು ರೈತರೊಂದಿಗೆ ಅಧಿಕಾರದ ಪತ್ರ ನೀಡಲಾಯಿತು.
ಈ ಸಮಯದಲ್ಲಿ ಸೋಮನಗೌಡ ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು. ಶಿವರಾಜ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು. ವೀರಣ್ಣ ಗಂಗಾಣಿ ತಾಲೂಕ ಅಧ್ಯಕ್ಷರು, ಜಗನ್ನಾಥ ಅಲ್ಬ ಹೆಬ್ಬಾಳ್ ಅಧ್ಯಕ್ಷರು, ಉಮೇಶ್ ಪಾಂಚಾಳ ಹೊಳಗೇರಾ, ಸಿದ್ದು ಚಟ್ನಳ್ಳಿ, ತಿಪ್ಪಣ್ಣ ಚನ್ನುರ, ಸಿದ್ದಪ್ಪ ಕಲಶೆಟ್ಟಿ, ಪವನ ಚಿದರಿ, ಅನೇಕ ರೈತರಿದ್ದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!