ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಉಪ ಅರಣ್ಯ ವಲಯ ಅಧಿಕಾರಿ ರಾಜಶೇಖರ್

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಕೆ ಹೊಸಹಳ್ಳಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಬಂಧುಗಳು ಮತ್ತು ವನಸಿರಿ ಫೌಂಡೇಷನ್ ಸಹಯೋಗದಲ್ಲಿ ವಿಶ್ವಕರ್ಮ ಬಂಧುಗಳ ಅರತಕ್ಷತೆ ಸಮಾರಂಭದಲ್ಲಿ 501 ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸಲಾಯಿತು.

ಈ ಸಂಧರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾನವಿ ಉಪ ಅರಣ್ಯ ವಲಯ ಅಧಿಕಾರಿ ರಾಜಶೇಖರ್ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ, ಇಂತಹ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಚನ್ನಪ್ಪ ಅವರ ಪರಿಸರ ಪ್ರೇಮ ಅಪಾರವಾದದು,ತಮ್ಮ ಅಣ್ಣನ ಮಗಳ ಮದುವೆ ಸಮಾರಂಭದಲ್ಲಿ 501 ಸಸಿಗಳನ್ನು ವಿತರಣೆ ಮಾಡಿ ಪರಿಸರ ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ, ಪ್ರತಿಯೊಬ್ಬರೂ ಇಂತಹ ಕಾರ್ಯಗಳನ್ನು ಮಾಡಲು ಮುಂದಾಗಬೇಕು ಎಂದರು.

ಕಾಡು ಬೆಳೆಸಿ ನಾಡು ಉಳಿಸಿ ಇದು ಕನ್ನಡ ನಾಡಿನ ಹೆಮ್ಮೆಯ ಘೋಷವಾಕ್ಯವಾಗಿದೆ ಅವಮಾನ ವೈಪರಿತ್ಯಗಳು ಪರಿಸರದ ಅಸಮತೋಲನ ಇನ್ನಿತರ ಹಲವು ಸಮಸ್ಯೆಗಳಿಗೆ ನಮ್ಮ ಪರಿಸರದ ಸುತ್ತಲೂ ಹಲವು ಸಸಿಗಳನ್ನು ನೆಡುವುದೊಂದೆ ಪರಿಹಾರವಾಗಿದೆ. ಇದಕ್ಕೆ ಪೂರಕವಾಗಿ ಸಿಂಧನೂರು ತಾಲೂಕಿನ ಕೆ ಹೊಸಹಳ್ಳಿ ಗ್ರಾಮದಲ್ಲಿ ಶ್ರಮಿಕರಿಗೆ ನೆರಳಾಗಲೆನ್ನುವ ಆಶಯದೊಂದಿಗೆ ವಿಶ್ವಕರ್ಮ ಬಂಧುಗಳ ಅರತಕ್ಷತೆ ಸಮಾರಂಭದಲ್ಲಿ 501 ಸಸಿಗಳ ವಿತರಣೆ ಮಾಡಿ ಪರಿಸರ ಸ್ನೇಹಿಯಾಗಿ ಸಸಿ ನೆಡುವ ಮೂಲಕ ಆಚರಿಸುವದಾಗಿ ಸ್ಥಳೀಯ ನಿವಾಸಿ ಚನ್ನಪ್ಪ ವಿಶ್ವಕರ್ಮ ರವರು ಹೇಳಿದರು.

ವಿನೂತನವಾಗಿ ವಿವಾಹವಾಗುತ್ತಿರುವ ಮೇಘನಾ ಮತ್ತು ಭೀಮೇಶ್ ಆಚಾರಿ ಆದರ್ಶವಾಗಿ ಪರಿಸರ ಪ್ರೇಮಿಯಾಗಿ ಆಚರಿಸುತ್ತಿರುವುದು ಗ್ರಾಮದಲ್ಲಿ ನಡೆದ ವಿಶೇಷ ಪ್ರಯತ್ನ ಎನ್ನಬಹುದಾಗಿದೆ.

ಇದೇ ವೇಳೆ ಮಹಿಳೆಯರು ಪರಿಸರ ಪ್ರೇಮಿಗಳು ಅತ್ಯಂತ ಉತ್ಸಾಹದಿಂದ ಸಸಿಗಳನ್ನು ಕೊಂಡೊಯ್ದರು.

ಕಾರ್ಯಕ್ರಮವು ಸರಳ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ನಡೆಯಲಿದೆ ಪರಿಸರವನ್ನು ಪ್ರೀತಿಸುವ ಮತ್ತು ಪ್ರೋತ್ಸಾಹಿಸುವ ಮುಗ್ಧ ಮನಸ್ಸುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂಧರ್ಭದಲ್ಲಿ ಗುಂಡಯ್ಯ ಸ್ವಾಮಿಗಳು ಸರ್ವೇಶ್ವರ ಮಠ ತುರವಿಹಾಳ ಮಾನವಿ ಉಪ ಅರಣ್ಯ ವಲಯ ಅಧಿಕಾರಿಗಳು ರಾಜಶೇಖರ್ ಅರಣ್ಯ ಅಧಿಕಾರಿಗಳು, ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ,ಮೌನೇಶ ತಿಡಿಗೋಳ ವಿಶ್ವಕರ್ಮ ಸಮಾಜದ ಅಧ್ಯಕ್ಷರು, ರಾಜ್ಯ ಕಾರ್ಯದರ್ಶಿ ಸೋಮಣ್ಣ ಸುಕಲಪೇಟೆ ಸಂಘಟನಾ ಕಾರ್ಯದರ್ಶಿ ಹಾಗೂ ವನಸಿರಿ ಫೌಂಡೇಷನ್ ಸದಸ್ಯ ಚನ್ನಪ್ಪ ಕೆ ಹೊಸಳ್ಳಿ,ಗುಂಜಳ್ಳಿ ಗ್ರಾಮ ಪಂಚಾಯತಿ PDO ಪಂಪಾಪತಿ ಹಾಗೂ ಸಿಬ್ಬಂದಿಗಳು, ವನಸಿರಿ ಫೌಂಡೇಷನ್ ಸದಸ್ಯರು, ವಿಶ್ವಕರ್ಮ ಸಮಾಜದ ಪಧಾಧಿಕಾರಿಗಳು, ವಿಶ್ವಕರ್ಮ ಬಂಧುಗಳು ಊರಿನ ಹಿರಿಯರು ಯುವಕರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!