ಬಳ್ಳಾರಿ/ ಕಂಪ್ಲಿ : ಪಟ್ಟಣದ ಅತಿಥಿ ಗೃಹದಲ್ಲಿ ರಾಮಸಾಗರ ಗ್ರಾಪಂ ಉಪಾಧ್ಯಕ್ಷ ಆರ್.ಎಂ.ರಾಮಯ್ಯ ಜನ್ಮದಿನದ ಅಂಗವಾಗಿ ಅವರ ಸಮ್ಮುಖದಲ್ಲಿ ಅಭಿಮಾನಿಗಳ ಬಳಗದಿಂದ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಜನ್ಮದಿಚಾರಣೆ ಆಚರಿಸಲಾಯಿತು.
ನಂತರ ಪುರಸಭೆ ಸದಸ್ಯ ವೀರಾಂಜಿನೇಯ ಮತ್ತು ಯುವ ಮುಖಂಡ ಎಸ್.ರುದ್ರಮುನಿ ಮಾತನಾಡಿ, ರಾಮಯ್ಯ ಇವರು ಧೀನ ದಲಿತರ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ಜೊತೆಗೆ ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇವರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬುದು ಪ್ರತಿಯೊಬ್ಬರ ಆಶಯವಾಗಿದೆ ಎಂದರು.
ಇಲ್ಲಿನ ಅಭಿಮಾನಿಗಳು ರಾಮಯ್ಯ ಇವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡೆಕೊರೇಶನ್ ನಾಗರಾಜ, ಎಸ್.ರುದ್ರಮನಿ, ಯಲ್ಲಪ್ಪ, ಶೇಖರ್, ಯಲ್ಲಪ್ಪ ಮುದ್ದಾಪುರ, ಮಾರೇಶ, ಹುಲುಗಪ್ಪ, ಕೊಮಾರಿ, ಬಾಬು, ಬಸವರಾಜ, ಟೈಲರ್ ರಾಮು, ಬಸವರಾಜ, ಗೋಪಿ, ಚಂದ್ರು, ಸುಣಗಾರ ಯಮನಪ್ಪ, ದೇವಣ್ಣ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















