ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರಿನ ಎಸ್ ಡಬ್ಲ್ಯೂ ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವತಿಯಿಂದ ನಾನಾ ಕಾರಣಗಳಿಂದ ಪದೇ ಪದೇ ಶಾಲೆ ಬಿಡುವ ಮಕ್ಕಳ ಮನೆ -ಮನೆಗೆ ತೆರಳಿ ಪೋಷಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರಲಾಯಿತು.
ಮುಖ್ಯಶಿಕ್ಷಕ ಮಂಜಪ್ಪ ಹೂಗಾರ ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು ಹಾಗೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಉಚಿತ ಪಠ್ಯ ಪುಸ್ತಕ, ಶೂ- ಸಾಕ್ಸ್, ಮಧ್ಯಾಹ್ನದ ಬಿಸಿ ಊಟ, ಕ್ಷೀರ ಭಾಗ್ಯ ಯೋಜನೆಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡಬೇಕು, ಮಕ್ಕಳು ಶಾಲೆಯಿಂದ ಹೊರ ಉಳಿಯದೆ, ಕಡ್ಡಾಯವಾಗಿ ಶಾಲೆಗೆ ಬಂದು ಶಿಕ್ಷಣದೊಂದಿಗೆ ಉತ್ತಮ ಭವಿಷ್ಯದ ಕಡೆಗೆ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಜ್ಯೋತಿ ಎಂ.ಎಂ. ಸಂಗಮ್ಮ, ಲಕ್ಷ್ಮಿ, ವೀರೇಶ, ರಾಜಾಸಾಬ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















