
ಬೀದರ್/ಬಸವಕಲ್ಯಾಣ : ಆಧ್ಯಾತ್ಮ, ಸತ್ಸಂಗ, ಪ್ರವಚನದಲ್ಲಿ ಮನುಷ್ಯನ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಪವಿತ್ರ ಶ್ರಾವಣ ಮಾಸ ಅಂಗವಾಗಿ ಪ್ರತಿ ವರ್ಷದಂತೆ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಸಮಾರೋಪ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಪ್ರವಚನದಿಂದ ಸುವಿಚಾರಿಗಳು ಹಾಗೂ ಬದುಕಿಗೆ ಉಪಯುಕ್ತವಾದ ಸಾರ್ಥಕ ಸಂದೇಶವನ್ನು ಕೇಳಿ ಮನಸ್ಸು ಪವಿತ್ರವಾಗುತ್ತದೆ. ಸಂಸಾರಿಕ ಹಾಗೂ ವ್ಯವಹಾರಿಕ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಸಿಗುತ್ತದೆ ಹೀಗಾಗಿ ಶ್ರೀಮಠದಲ್ಲಿ ನಿರಂತರ ದಾಸೋಹ ಪೂಜೆ ಜಪ ಪ್ರವಚನ ಭಜನೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿರುವುದು ಭಕ್ತರಿಂದ ಭಕ್ತರ ಭಕ್ತಿ ದೊಡ್ಡದು ಎಂದು ಉಪದೇಶಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶಿಕ್ಷಕ ಶ್ರೀ ಮಲ್ಲಿಕಾರ್ಜುನ ಅಲಗುಡೆ ಮಾತನಾಡಿ ಹರ ಮುನಿದರೆ ಗುರು ಕಾಯುವನು ಗುರು ಮುನಿದರೆ ಹರ ಕಾಯಲಾರ ಗುರುವಿನಗಿಂತ ದೊಡ್ಡವರು ಯಾರು ಇಲ್ಲ ನಾವೆಲ್ಲರೂ ಕೂಡಿಕೊಂಡು ಗವಿಮಠದ ಬೆಳವಣಿಗೆಗೆ ಸನ್ನದ್ಧರಾಗೋಣ ನಾವ್ ಬರುವಾಗಲೂ ಏನು ತೆಗೆದುಕೊಂಡು ಬಂದಿಲ್ಲ ಹೋಗುವಾಗಲೂ ಏನು ತೆಗೆದುಕೊಂಡು ಹೋಗುವುದಿಲ್ಲ ಆದರೆ ಗವಿಮಠದ ಶ್ರೀ ಘನಲಿಂಗ ರುದ್ರಮನಿ ಶಿವಯೋಗಿಗಳ ಆಶೀರ್ವಾದ ಪೂಜ್ಯ ಅಭಿನವ ಶ್ರೀಗಳ ಆಶೀರ್ವಾದ ನಮ್ಮ ಮೇಲೆ ಯಾವತ್ತು ಇರಲಿ ಎಂದು ಬೇಡಿಕೊಂಡರು.
ವಿಶೇಷ ಸನ್ಮಾನ ಸ್ವೀಕರಿಸಿದ ರಾಜೀವ್ ಗಾಂಧಿ ಕಾಲೇಜಿನ ಉಪನ್ಯಾಸಕರಾದ ಪ್ರೊ. ರುದ್ರೇಶ್ವರ ಗೋರ್ಟಾ ಅವರು ಮಾತನಾಡುತ್ತಾ ಒಂದು ತಿಂಗಳ ಪರಂತರವಾಗಿ ವಿಶೇಷ ಉಪನ್ಯಾಸಗಳು ಬಹಳ ಅದ್ದೂರಿಯಾಗಿ ಜರುಗಿದವು. ಪರಮಪೂಜ್ಯರ ಆಶ್ರಯದಂತೆ ವಿಶೇಷ ಉಪನ್ಯಾಸಮಾಲೆಯು ಬಹಳ ಸುಸೂತ್ರವಾಗಿ ಅರ್ಥಪೂರ್ಣವಾಗಿ ಮೌಲ್ವಿಕವಾಗಿ ಜರುಗಿವೆ ಪರಮಪೂಜ್ಯರ ಸತ್ಯ ಸಂಕಲ್ಪ ಸಿದ್ದಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ವಿಶೇಷ ಉಪನ್ಯಾಸಮಾಲೆಯು ಪ್ರತಿ ವರ್ಷ ನಡೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆ ನಾವು ಪರಮ ಪೂಜ್ಯರ ಜೊತೆ ಯಾವತ್ತೂ ಕೂಡ ಇದ್ದೇವೆ ಅವರು ತೆಗೆದುಕೊಳ್ಳುವಂತಹ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಲಾನಯನ ಅಧಿಕಾರಿಗಳಾದ ಶ್ರೀ ಬಸವಂತಪ್ಪ ಲವಾರೆ ಅವರು ಮಾತನಾಡುತ್ತಾ ಗವಿಮಠದಲ್ಲಿ ಒಂದು ಅದ್ಭುತವಾಗಿರುವಂತ ಶಕ್ತಿ ನಮ್ಮೆಲ್ಲರನ್ನು ಒಂದುಗೂಡಿಸುತ್ತಿದೆ ಇಲ್ಲಿ ಬಂದು ಸ್ವಲ್ಪ ಹೊತ್ತು ಕೂತಿದ್ದರೆ ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಷ್ಟೇ ಕಷ್ಟ ತಾಪತ್ರೆಗಳು ಬಂದರೂ ಕೂಡಾ ಈ ಗವಿಮಠದ ಸ್ಥಳದಲ್ಲಿ ಅದ್ಭುತವಾಗಿರುವಂತ ಶಕ್ತಿ ಇದೆ ತಿಳಿದುಕೊಂಡವರಿಗಷ್ಟೇ ಗೊತ್ತು ಇಲ್ಲಿ ನಡೆದಿರುವಂತಹ ಭಕ್ತಾದಿಗಳಿಗೆ ಒಂದೊಂದು ಆಶೀರ್ವಾದ ಆಗಿವೆ ಅಂಥಹ ಒಂದು ಗುರುವಿನ ಸೇವೆ ನಾವು ನೀವೆಲ್ಲರೂ ಕೂಡಾ ಮಾಡುತ್ತಾ ಇರೋಣ ಎಂದು ನುಡಿದರು.
ಅತಿಥಿಯಾಗಿದ್ದ ಶ್ರೀ ಅನೀಲಕುಮಾರ ಬಾಗೇವಾಡಿ ಅವರು ಮಾತನಾಡುತ್ತಾ ಗವಿಮಠ ಮೊದಲು ಕೂಡಾ ನೋಡಿದ್ದೇವೆ ಈಗಲೂ ನೋಡುತ್ತಿದ್ದೇವೆ ಮನುಷ್ಯ ಏನು ಬಯಸಿ ಬರುತ್ತಾನೊ ಅವನ ಕೆಲಸ ಸರಳ ಗೊಳ್ಳುವಲ್ಲಿ ಎರಡು ಮಾತಿಲ್ಲ ಅಂಧಕಾರದಲ್ಲಿ ಬಂದಂತಹ ವ್ಯಕ್ತಿಗಳಿಗೆ ಜ್ಞಾನದ ಮಾರ್ಗವನ್ನು ತಿಳಿಸುವಂತಹ ಪೂಜ್ಯರು ಅಭಿನವ ಶ್ರೀಗಳು ಅಂತವರು ನಮ್ಮ ನಿಮ್ಮೆಲ್ಲರಿಗೂ ಸಿಕ್ಕಿರುವಂಥದ್ದು ನಮ್ಮೆಲ್ಲರ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಅತಿಥಿಯಾಗಿ ರಾಕೇಶ ಪುರವಂತ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪೂಜ್ಯಶ್ರೀಗಳು ಶ್ರೀಮಠದಲ್ಲಿ ಒಂದು ತಿಂಗಳ ಪರಿಯಂತರ ಪ್ರಸಾದ ಸೇವೆ, ರುದ್ರಾಭಿಷೇಕ ಪೂಜೆ, ಪೂಜ್ಯ ಗುರುಗಳ ಸೇವೆ ಮಾಡಿರುವಂತಹ ಸೇವಕರಿಗೆ ಸನ್ಮಾನಿಸಲಾಯಿತು.
ಭಜನೆ : ಬೇಲೂರ ಗ್ರಾಮದ ಭಜನಾ ಮಂಡಳಿಯಿಂದ ಭಜನೆ ಜರುಗಿತು.
ಅಭಿಷೇಕ ಶಿವಶಂಕರ ರಾಮಣ್ಣನವರ
ಸ್ವಾಗತಿಸಿದರು. ಶರಣಬಸಪ್ಪ ಅಲಗುಡೆ ಮಂಗಲ ಗೀತೆ ಹಾಡಿದರು.
ಈ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮದಲ್ಲಿ ಬಾಪು ರಾಯ ಸಾಹುಕಾರ ಚನ್ನೂರ, ಲಿಂಗನಗೌಡ ಪೊಲೀಸ್ ಪಾಟೀಲ, ದೇವನಗೌಡ ಪಾಟೀಲ, ರುದ್ರಮುನಿ ಹಿರೇಮಠ, ಸಿದ್ದಲಿಂಗಪ್ಪ ಸಾಹುಕಾರ,ಶಿವಕುಮಾರ ಪಾಟೀಲ, ಪ್ರದೀಪ ಬಿರಾದಾರ, ಸರಸ್ವತಿ ಬೆಂಬಲಗೆ, ಶಕುಂತಲಾ ಮಠ, ಜ್ಯೋತಿ ಸಂಗಮೇಶ ಪಾಟೀಲ, ಸವಿತಾ ರಮೇಶ ಸ್ವಾಮಿ, ರೇಖಾ ಚಿಟ್ಟೆ,ಪ್ರೇಮಲಾ ರಾಮಣ್ಣಾ, ಸುರೇಖಾ ಸಜ್ಜನಶೆಟ್ಟಿ, ಪಾರ್ವತಿ ಶಂಕರ ರೋಜೆ, ಸುನೀತಾ ಸಂಗಪ್ಪಾ ಭಾಲ್ಕೆ ಇನ್ನಿತರರು ಉಪಸ್ಥಿತರಿದ್ದರು. ಮೊದಲಾದ ಭಕ್ತರು ಪಾಲ್ಗೊಂಡು ಗುರುಗಳ ದರ್ಶನ, ಆಶೀರ್ವಾದ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು.
ವರದಿ : ಶ್ರೀನಿವಾಸ ಬಿರಾದಾರ



















