ಆಟ ಪಾಠಗಳನ್ನು ತಿದ್ದಿ ತೀಡಿ ಕಲಿಸಿ,
ಶಿಸ್ತಿನ ಸಂಯಮಗಳನು ಬೋಧಿಸಿ,
ನ್ಯಾಯ ನೀತಿ, ಧರ್ಮ ಮಾರ್ಗ ತಿಳಿಸಿ,
ಹರಸಿದರು ಸನ್ಮಾರ್ಗ ದಾರಿ ತೋರಿಸಿ.
ಅಳಿಸಿದರು ನನ್ನೊಳಗಿಹ ಅಜ್ಞಾನ,
ಕೊಟ್ಟರು ಅಕ್ಷರಗಳ ದಿವ್ಯ ಸುಜ್ಞಾನ,
ಸೃಷ್ಟಿಸಿ ಮನದಲಿ ಹೊಸತು ಅಲೆಯ,
ತಿಳಿಸಿದರು ಬಾಳಿನ ಹಲವು ಕಲೆಯ.
ಕೇಳದೇ ಅರಿತರು ನನ್ನ ಮನದ ಭಾವ,
ತಲೆಯಲ್ಲಿ ತುಂಬಿದರು ಜ್ಞಾನದ ಜೀವ,
ಸ್ವಾರ್ಥ ತೋರದೆ ಬಿತ್ತಿದರು ಮೌಲ್ಯವ,
ಕೊಟ್ಟು ನಡೆದರು ಬದುಕಿನ ಮಾರ್ಗವ.
ನನ್ನೊಳಗೆ ಭರವಸೆಯ ಶಕ್ತಿಯ ತುಂಬಿ,
ಸತ್ಪ್ರಜೆಯಾಗು ಎನ್ನುತಲಿ ನನ್ನ ನಂಬಿ,
ಮಾಡಿದರು ನನ್ನನು ಶ್ರೇಷ್ಠ ಸ್ವಾವಲಂಬಿ,
ಸುಖಿಯಾದೆ ನಾನಿಂದು ಗುರುವ ನಂಬಿ.

✍️ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.




















