ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಳೆ ಪರಿಹಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯಿಂದ ಮನವಿ ಪತ್ರ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಸುಮಾರು 10 ಸಾವಿರ ಲಕ್ಷಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 62 ಮನೆಗಳು ಬಿದ್ದಿವೆ ಅದರಲ್ಲಿ ಸುಮಾರು 16 ಸಾವಿರ ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ರೈತ ಸಂಘಟನೆದವರು ಸ್ಥಳೀಯ ಶಾಸಕರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಮತ್ತು ಹಿಂಗಾರು ಬಿತ್ತನೆಗೆ ಸ್ವಚ್ಛ ಮಾಡಬೇಕಾಗಿದೆ. ಹೊಲಗಳ ಬೀಳು ಬಿದ್ದಿರುವುದರಿಂದ ಕೂಡಲೇ ಇನ್ಸೂರೆನ್ಸ್ ವಿಮೆ ಹಣ ಕೊಡಬೇಕು ಮತ್ತು ಅತಿವೃಷ್ಟಿ, ಅನಾವೃಷ್ಟಿಯ ಪರಿಹಾರ 25ಸಾವಿರ ನೀಡಬೇಕು. ರೈತನ ಕೈಗೆ ಬಂದ ತುತ್ತು, ಬಾಯಿಗೆ ಬರದಂತಾಗಿದೆ. ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ ರೈತ ಕಷ್ಟದಲ್ಲಿದ್ದಾನೆ ಹಾಗಾಗಿ ಕೂಡಲೇ ಪರಿಹಾರವನ್ನು ನೀಡಿ ರೈತನ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಮತ್ತು ಹಿಂಗಾರು ಬಿತ್ತನೆಗೆ ರಸಗೊಬ್ಬರ, ಬಿತ್ತನೆ ಬೀಜ, ಜೋಳ, ಕಡಲೆ, ಕುಸುಬಿ, ಸೂರ್ಯಕಾಂತಿ, ಗೋಧಿ ಹೀಗೆ ಇನ್ನಿತರ ಬೀಜಗಳು ಫ್ರೀಯಾಗಿ ಅಂದರೆ ಪುಕ್ಕಟೆಯಾಗಿ ರೈತರಿಗೆ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಹೋದ ವರ್ಷ ನಿಂತಿರುವ 3 ಲಕ್ಷ ಕೋಟಿ ಪರಿಹಾರ ಧನ ಕೂಡಲೇ ಕೊಡಬೇಕೆಂದು ಆಗ್ರಹಿಸುತ್ತೇವೆ ಎರಡು ಮೂರು ವರ್ಷಗಳಿಂದ ರೈತ ಕಷ್ಟದಲ್ಲಿದ್ದಾನೆ ಕೂಡಲೇ ರೈತನಿಗೆ ಸರ್ಕಾರ ರೈತನ ನೆರವಿಗೆ ಧಾವಿಸಿ ಪರಿಹಾರ ನೀಡಿ ರೈತನಿಗೆ ಪ್ರೋತ್ಸಾಹಿಸಬೇಕೆಂದು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕೇಳಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ಘಟಕ, ಶಿವರಾಜ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಭೀಮರಾವ ಮಲಘಾಣ, ಜಗನ್ನಾಥ್ ಅಲ್ಬ, ಮಲ್ಲು ಪಾಟೀಲ್, ಶಿವಕುಮಾರ್ ಕೋಡ್ಲಿ , ಅಧ್ಯಕ್ಷರು ಸುಂದರ ವೀರಣ್ಣ ಸೀಗಿ, ನಿಂಗಪ್ಪ ನಾಮದಾರ್ ಮಲಘಣ, ಈರಣ್ಣ ಸಾಗರ್ ಮಂಗಲಗಿ, ಚಂದ್ರಶೇಖರ್ ಮಂಗಲಗಿ, ಗುರುನಾಥ್ ಎಸ್ ದೊಡ್ಮನಿ, ಶಿವಲಿಂಗಪ್ಪ ಬಿ ಸುಲಪೇಟ, ದೇವೇಂದ್ರಪ್ಪ ಎನ್ ನರಬೋಳ, ಕಟಂಗೆಯ ಎಸ್ ಪ್ಯಾಟಿಮನಿ ಸೇರಿದಂತೆ ಇತರರು ಭಾಗಿಯಾಗಿದ್ದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!