ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೀಗೊಂದು ಮನವಿ

ಭಾರತದ ಮುಖ್ಯ ನ್ಯಾಯಾಧೀಶರಿಗೆ ಹೃದಯ ಪೂರ್ವಕವಾಗಿ ಭಾರತದ ಕಾನೂನಿಗೆ ತಲೆ ಭಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.
ಭಾರತದ ಸಂವಿಧಾನಾತ್ಮಕವಾಗಿ ಭಾರತ ದೇಶದ ಪ್ರಜೆಗಳಿಗೆ ಪ್ರಜಾಪ್ರಭುತ್ವ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳು ಕಾನೂನಿನ ಮೂಲಕ ಜನರ ಆರ್ಥಿಕ ಸಾಮಾಜಿಕ ಪಿಡುಗು,ಬಡತನ ನಿರ್ಮೂಲನೆ ,ಅಸ್ಪಶ್ಯತೆ ,ಶೈಕ್ಷಣಿಕ, ಉದ್ಯೋಗ, ಭ್ರಷ್ಟಾಚಾರ ನಿರ್ಮೂಲನೆ, ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಹೋಗಲಾಡಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ ವಿನಃ ಕಡಿಮೆ ಆಗುತ್ತಿಲ್ಲ ಸ್ವಾಮಿ ಹೀಗಿರುವಾಗ ನಮ್ಮ ದೇಶದ ಭಾರತದ ಸಂವಿಧಾನಾತ್ಮಕವಾಗಿ ಇರುವಂತಹ ಮೂಲಭೂತ ಸೌಕರ್ಯಗಳು ಜನರಿಗೆ ಸಿಗುವಂತೆ ಕಠಿಣ ಕಾನೂನು ಕ್ರಮ ಜರುಗಿದರೂ ಸಹ ಸಾಕಷ್ಟು ಗ್ರಾಮಿಣ ಜನರ ಅಭಿವೃದ್ಧಿಗಾಗಿ ಇರುವ ಮೂಲಭೂತ ಹಕ್ಕುಗಳ ಸೌಕರ್ಯಗಳು ಗ್ರಾಮಿಣ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಸಮುದಾಯದ ಜನರಿಗೆ 40 % ಕೂಡಾ ಸಿಗುತ್ತಿಲ್ಲ ಸ್ವಾಮಿ ನನ್ನದೊಂದು ಹೃದಯ ಪೂರ್ವಕ ಮನವಿ ಸುಪ್ರೀಂ ಕೋರ್ಟ್
ಭಾರತದ ಮುಖ್ಯ ನ್ಯಾಯಾಧೀಶರಾಗಿರುವ
ನ್ಯಾಯಮೂರ್ತಿ ಭೂಷಣ ರಾಮಕೃಷ್ಣ ಗವಾಯಿ
ಭಾರತದ ಮುಖ್ಯ ನ್ಯಾಯಾಧೀಶರಾಗಿರುವರಲ್ಲಿ ಹೃದಯ ಪೂರ್ವಕ ಗೌರವದೊಂದಿಗೆ ಕಾನೂನಿಗೆ ತಲೆ ಭಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಯೋಜನೆಗಳನ್ನು ಗ್ರಾಮಿಣ ಪ್ರದೇಶದಲ್ಲಿ ವಾಸಿಸುತ್ತಿರುವ ಗ್ರಾಮಿಣ ಜನರ ಅಭಿವೃದ್ಧಿಗಾಗಿ ಇರುವ ಮೂಲಭೂತ ಸೌಕರ್ಯಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಿಯಾದ ರೀತಿಯಲ್ಲಿ ಗ್ರಾಮಿಣ ಜನರ ಮಾಹಿತಿ ಸಹ ಇಲ್ಲ, ಮಾಹಿತಿ ಇದ್ರೂ ಕೂಡ ಕೆಲವೊಂದಿಷ್ಟು ರಾಜ್ಯ ಜಿಲ್ಲೆ ತಾಲುಕೂ ಗ್ರಾಮ ಅಧಿಕಾರಿಗಳು ಭಾರತದ ಸಂವಿಧಾನಾತ್ಮಕವಾಗಿರುವ ಕಾನೂನಿ ಚೌಕಟ್ಟನ್ನು ಮೀರಿ ಅಧಿಕಾರ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಸಮುದಾಯದ ಜನರ ಅಭಿವೃದ್ಧಿಗಾಗಿ ಇರುವ ಮೂಲಭೂತ ಸೌಕರ್ಯಗಳು 30% ಕೂಡಾ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ ಸ್ವಾಮಿ.
ಗ್ರಾಮೀಣ ಪ್ರದೇಶದ ಜನರ ತೆರಿಗೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಬರುತ್ತಿರುವ ಅನುದಾನಗಳು ಮೂಲಭೂತ ಸೌಕರ್ಯಗಳು ಬರೀ ಪ್ರಚಾರಕ್ಕೆ ಸೀಮಿತ ಚಾಲನೆ ಆಗಿದೆ ಇರಲಿ ಸ್ವಾಮಿ ನಮ್ಮ ದೇಶದ ಜನರ ಅಭಿವೃದ್ಧಿಗಾಗಿರಲಿ
ಪ್ರತಿಯೊಂದು ಸಮುದಾಯದ ಜನರ ಅತೀ ಅಗತ್ಯತೆ ಇರುವ ಮೂಲಭೂತ ಸೌಕರ್ಯಗಳು ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ ಮೊದಲು ಸರಿಯಾದ ರೀತಿಯಲ್ಲಿ ಶಿಕ್ಷಣ, ಆಸ್ಪತ್ರೆ, ಉದ್ಯೋಗ, ವಸತಿ, ವಿದ್ಯುತ್, ಶುದ್ಧ ಕುಡಿಯುವ ನೀರು, ರೈತರಿಗೆ ನೀರಾವರಿ,ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ, ರಸ್ತೆ, ಸಾರಿಗೆ ಇಷ್ಟು ಸಾಕು ಭಾರತ ಸರ್ಕಾರದಿಂದ ಬರುತ್ತಿರುವ ಮೂಲಭೂತ ಸೌಕರ್ಯಗಳು ಸರಿಯಾದ ರೀತಿಯಲ್ಲಿ ಗ್ರಾಮಿಣ ಜನರಿಗೆ ಎಲ್ಲಿವರೆಗೂ ಸಿಗುವದಿಲ್ಲವೋ ನಮ್ಮ ದೇಶದ ಆರ್ಥಿಕತೆ, ಬಡತನ, ಭ್ರಷ್ಟಾಚಾರ, ಮಹಾಮಾರಿ ರೋಗಗಳು ಅಸ್ಪಶ್ಯತೆ ಅಳಿಯುವುದಿಲ್ಲ.
ಜನರ ತೆರಿಗೆ ಬೇಕು ಜನರಿಗೆ ಇರುವಂತಹ ಸರಕಾರದಿಂದ ಬರುವಂತ ಮೂಲಭೂತ ಸೌಕರ್ಯಗಳು ಅನುದಾನ ಬೇಕು ಜನರ ಅಭಿವೃದ್ಧಿಯೇ ಮಾತ್ರ ಬೇಡ.

  • ಯಮನಪ್ಪ ಮಾದರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!