ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿಸಿ ಕ್ಯಾಮೆರಾಗಳ ಕಣ್ಗಾವಲು, ಪೊಲೀಸ್ ಸರ್ಪಗಾವಲಿನಲ್ಲಿ ಗಣೇಶ ವಿಸರ್ಜನೆ

ಬಳ್ಳಾರಿ / ಕಂಪ್ಲಿ : ಡಿಜೆ ಆರ್ಭಟಕ್ಕೆ ಕುಣಿದು ಹೂಪ್ಪಳಿಸಿದ ಯುವಕರು ಕಂಪ್ಲಿಯಲ್ಲಿ ಏಳನೇ ದಿನದ ವಿನಾಯಕ ವಿಸರ್ಜನೆ ವೀಕ್ಷಣೆಗೆ ಜನಸಾಗರ
ವಿನಾಯಕ ಚತುರ್ಥಿಯ ಸಂಭ್ರಮದ ನಂತರ 7ನೇ ದಿನವಾದ ಮಂಗಳವಾರ ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಯುವಕರು ವಿಶೇಷ ಮೆರುಗು ನೀಡಿದರು. ಹಬ್ಬದ ಹುಮ್ಮಸ್ಸಿನಲ್ಲಿ ನಾನಾ ಡಿಜೆ ಸೌಂಡ್ ಗಳಿಗೆ ಹೆಜ್ಜೆ ಹಾಕಿದ ಯುವ ಭಕ್ತ ಸಮೂಹ ಗಣಪತಿ ಬಪ್ಪ ಮೌರ್ಯ ಗಣೇಶನಿಗೆ ಜೈ ಎಂಬ ಘೋಷಣೆಯೊಂದಿಗೆ ಇಡಿ ವಾತಾವರಣವನ್ನು ಉತ್ಸಾಹಭರಿತವನ್ನಾಗಿ ಮಾಡಿದರು. ಮೆರವಣಿಗೆಯಲ್ಲಿ ಬಾರಿ ಬಹಳಷ್ಟು ಸಾರ್ವಜನಿಕರು ಸೇರಿದ್ದರು ಅಲ್ಲದೆ ಗಣೇಶ ಮೂರ್ತಿಗಳನ್ನು ವೀಕ್ಷಿಸಲು ದಾರಿದಕ್ಕೂ ಜನರು ರಸ್ತೆ ಬದಿ ಬಂದು ನಿಂತಿದ್ದರು. ಗಣೇಶ ಮೂರ್ತಿಗಳ ಮೆರವಣಿಗೆ ಸಾಗುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಜನಸಾಗರ ಕಂಡು ಬಂತು. ಯುವಕರು ತಮ್ಮ ವಿಶಿಷ್ಟ ನೃತ್ಯಗಳ ಮೂಲಕ ನೋಡುಗರ ಗಮನ ಸೆಳೆದರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಸುಗಮವಾಗಿ ವಿಸರ್ಜನೆ ಕಾರ್ಯ ನೆರವೇರಿಸಲು ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು . ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಿನಲ್ಲಿ ಇಡೀ ಮೆರವಣಿಗೆ ನಡೆಯಿತು ಪ್ರತಿ ಮೂರ್ತಿಯೊಂದಿಗೆ ನಿಯಂತ್ರಣ ಘಟಕದ ಸಿಬ್ಬಂದಿದ್ದು ನಿರಂತರವಾಗಿ ಪರಿಸ್ಥಿತಿಯನ್ನ ಮೇಲ್ವಿಚಾರಣೆ ಮಾಡಲಾಯಿತು. ಸುರಿದ ಮಳೆಯಲ್ಲೂ ಹೆಚ್ಚಿನ ಜನಸಂದಣೆ ಮತ್ತು ಡಿಜೆ ಸದ್ದು ನಿಯಂತ್ರಿಸಲು ಪೊಲೀಸರು ಹರಾಸಾಹಸ ಪಟ್ಟರು. ಯುವಕರ ಸಂಭ್ರಮದ ನಡುವೆಯೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಯಶಸ್ವಿಯಾದರು ವಿಸರ್ಜನಾ ಕಾರ್ಯ ಶಾಂತಿಯುತವಾಗಿ ಸಂಪನ್ನಗೊಂಡಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!