
ಮಹಾರಾಷ್ಟ್ರ :ಸಾಂಗಲಿ ಜಿಲ್ಲೆ ಜತ್ತ ತಾಲೂಕ ಗುಡ್ಡ ಗಳಿಂದ ಕೂಡಿದ ಪ್ರದೇಶ. ದ್ರಾಕ್ಷಿ ಹಾಗೂ ದಾಳಿಂಬೆ ಇಲ್ಲಿನ ಪ್ರಮುಖ ಬೆಳೆ ಹೋರಾಟಗಾರ ದೇಶಾಭಿಮಾನಿ ಹೆಬ್ಬುಲಿ ಎಂದು ಹೆಸರಾದ ಸಿಂಧೂರ ಲಕ್ಷ್ಮಣನಿಗೆ ಜನ್ಮ ನೀಡಿದ ಜನ್ಮ ಭೂಮಿ ಇದೇ ತಾಲೂಕ ಮರಾಠಿ ನೆಲದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವುದರಲ್ಲಿ ಶಿಕ್ಷಕರ ಪ್ರಮುಖ ಪಾತ್ರವಿದೆ. ಮಲ್ಲಪ್ಪ ಶಿವಪ್ಪ ಸಿಂಧೂರಯವರ ಹೋರಾಟ ಪರಿಶ್ರಮ ನಿಸ್ವಾರ್ಥ ಸೇವೆ ಕನ್ನಡದ ಮೇಲೆ ಅಪಾರ ಪ್ರೀತಿಯಿಂದ ಇಂದು ಜತ್ತ ತಾಲೂಕಿನಲ್ಲಿ ಕನ್ನಡ ಶಾಲೆಗಳು ಜೀವಂತ ಇರಲಿಕ್ಕೆ ಪ್ರಮುಖರು ಅದೇ ರೀತಿ ಶ್ರೀಶೈಲ ಅವಟಿ ಬಿ. ಎಮ್. ದೇವನಾಯಕ ಆರ್. ಕೆ. ಬಿರಾದಾರ, ಜಯನಂದ ತುಂಗಳ ಮೀನಾಕ್ಷಿ ಸ್ವಾಮಿ ಹತ್ತಿ ಡಾII ಸುರೇಖಾ ಹೋತಿ೯ಕರ ಪ್ರಶಾಂತವಾಗ್ಗೂಲಿ. ರಾಜೇಂದ್ರ ಹಿರೇಮಠ ದಿಲೀಪ್ ಕಾಂಬಳೆ ಭಾಗ್ಯಶ್ರೀ ಹೋರ್ತಿಕರ್ ನಂತಹ ಸಾಲಿನಲ್ಲಿ ನಿಲ್ಲುವ ಯುವ ಸಾಹಿತಿ ಹಾಗೂ ಶಿಕ್ಷಕರಾದ ಚಂದ್ರಶೇಖರ್ ಕಾರಕಲ್ ಯವರು.
ತಾಲೂಕಿನ ಜಿಲ್ಲಾ ಪರಿಷತ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ತಿಕ್ಕು೦ಡಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ ಹಾಗೂ ಮಮತೆಯ ಸಾಕಾರ ಮೂರ್ತಿಯಂದರೆ ತಪ್ಪಗಲಾರದು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ದಯೆ ಕರುಣೆ. ಸಹಾಯ ವಿಶ್ವಾಸ ಮುಂತಾದ ಗುಣಗಳನ್ನು ಕಲಿಸುತ್ತಾ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಕಾರಣಿಭೂತರಾಗಿದ್ದಾರೆ ನಲಿ ಕಲಿ ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟ ಮಾಡಿ ಕನ್ನಡ ಮಕ್ಕಳಿಗೆ ಹಂಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಶಿಕ್ಷಕರು ಹಳ್ಳಿ ಹಳ್ಳಿಯಲ್ಲಿ ಇದ್ದರೆ ಅನ್ಯ ಭಾಷೆಯ ಶಾಲೆಗಳಿಗೆ ಪೈಪೋಟಿ ನೀಡುವುದರಲ್ಲಿ ಸಂಶಯವಿಲ್ಲ. ಶಿಕ್ಷಣ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಟಿಯಲ್ಲಿ ಭಾಗವಹಿಸಿ ಗಡಿ ಕನ್ನಡಿಗರ ಆಸ್ತಿತ್ವವನ್ನು ಸಾಭೀತು ಪಡಿಸಿದ್ದಾರೆ.
ಶಿಕ್ಷಕ ವೃತ್ತಿ: ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆ ಬೆಳ್ಳುಂಡಗಿಯಲ್ಲಿ ಆರು ವರುಷ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆ ಜಾಲಿಹಾಳ (ಬು.) ಆರು ವರುಷ ಈಗ ತಾನೇ ತಿಕ್ಕುಂಡಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಮಾಡುತ್ತಿದ್ದಾರೆ.
ಹವ್ಯಾಸ : ಚಿತ್ರಕಲೆ ಕಥೆ ಕವನ ಕಾದಂಬರಿ ಓದುವುದು ಬರೆಯುವುದು ಹಾಗೂ ಚಲನಚಿತ್ರ ನೋಡುವುದು.
ಸಾಹಿತ್ಯ ಸೇವೆ : ಮಕ್ಕಳ ಸಲುವಾಗಿ ಮೂರು ಕಿರುನಾಟಕ ರಚನೆ ಮಾಡಿ ಅಭಿನಯಿಸಲಾಗಿದೆ. ಬಾನ ಚ೦ದಿರ ಕವನ ಸಂಕಲನ ಮರಾಠಿಯಿಂದ ಕನ್ನಡಕ್ಕೆ 5 ಕಥೆ ಅನುವಾದ ಮಾಡಿ ಪ್ರಕಟಣೆ ಮಾಡಲಾಗಿದೆ. ಕನ್ನಡದಿಂದ ಮರಾಠಿಗೆ ಅನುವಾದ ಮಾಡಲಾಗಿದೆ. ಅದು ಕುವೆಂಪು ಭಾಷಾ ಭಾರತಿಯವರು ಪ್ರಕಟಣೆ ಮಾಡಲಿದ್ದಾರೆ.ಮಹಾರಾಷ್ಟ ಹಾಗೂಕರ್ನಾಟಕದ ಗಡಿ ಭಾಗ ಅದರಾಚೆಗೆ ಕನ್ನಡದ ಡಿಜೆಟಲ್ ಪತ್ರಿಕೆ ಮಹಾಗುರು ಸಂಪಾದಕರಾಗಿ ಪ್ರಕಟಿಸಿದ ಅನುಭವವಿದೆ.
ಸಹಭಾಗ: ಅಕ್ಕಲಕೋಟದಲ್ಲಿ ನಡೆದ ನುಡಿಸಿರಿ ಕವಿಗೋಷ್ಠಿ ರಾಯಚೂರು ಹಾಗೂ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜತ್ತ ತಾಲೂಕ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಪುರಸ್ಕಾರ : ಜತ್ತ ತಾಲೂಕಾ ಸಹರಾ ಫೌಂಡೇಶನ್ ವತಿಯಿಂದ ಆದಶ೯ ಶಿಕ್ಷಕ ಪುರಸ್ಕಾರ. ಕವಠೆ ಮಹಾಂಕಾಳ ಸ್ಟರಾಜ ಫೌಂಡೇಷನ್ ವತಿಯಿಂದ ಆದರ್ಶ ಶಿಕ್ಷಕ ಪುರಸ್ಕಾರ ಚಿತ್ರದುರ್ಗ ಸಾಹಿತ್ಯರತ್ನ. ಲಾಯನ್ಸ್ ಕ್ಲಬ್ ಜತ್ತ ವತಿಯಿಂದ ಆದರ್ಶ ಶಿಕ್ಷಕ ಪುರಸ್ಕಾರ ಹಾಗೂ ರಾಜ್ಯ ಮಟ್ಟದ ನುಡಿಸಿರಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಒಲಿದು ಬಂದಿವೆ.
ಚಂದ್ರಶೇಖರ ಕಾರಕಲ್ ಯವರ ಶಿಕ್ಷಣ ಸಾಹಿತ್ಯ ಅದರ ಜೊತೆಗೆ ಕನ್ನಡ ಕಟ್ಟುವ ಕೆಲಸ ನಿರ೦ತರವಾಗಿರಲಿ…
ಲೇಖಕರು. ದಯಾನಂದ ಎಂ.ಪಾಟೀಲ, ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ.



















