ಕಲಬುರಗಿ/ ಯಡ್ರಾಮಿ :ಶಿಕ್ಷಕರ ದಿನಾಚರಣೆಯನ್ನು ತಾಲ್ಲೂಕಿನ ಅಲ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಕೂಡಿಕೊಂಡು ಮುಖ್ಯ ಗುರುಗಳಿಗೆ, ಗುರುಮಾತೆಯರಿಗೆ ಸನ್ಮಾನಿಸಿದರು. ಗ್ರಾಮದ ಹಿರಿಯರಾದ ಶ್ರೀ ಶರಣಯ್ಯ ಹಿರೇಮಠ, ದೇವಿಂದ್ರಯ್ಯ ಹಿರೇಮಠ, ಪ್ರಭುಗೌಡ ಬಿರಾದಾರ, ಯಶ್ವಂತ್ ಗೌಡ ಬಿರಾದಾರ, ಗೊಲ್ಲಾಳ ಮಂದೇವಾಲ, ವಿನೋದ್ ಹಂಚಿನಾಳ, ಜೇವರ್ಗಿ ಪಿ. ಎಲ್. ಡಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಸಾಂಬಶಿವ ಎಂ. ಹಿರೇಮಠ ಶಿಕ್ಷಕರನ್ನು ಗೌರವಿಸಿದರು.
ವರದಿ ರಾಚೋಟಯ್ಯ ಹಿರೇಮಠ



















