ಕಲಬುರಗಿ/ ಸೇಡಂ: ತಾಲೂಕಿನ ಮೋತಕಪಲ್ಲಿ ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ಶ್ರೀ ಬಷೀರ್ ಅಹ್ಮದ್ ರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಪಡೆದ ನಿಮಿತ್ತವಾಗಿ ನರೇಶ್ ಎ. ನಾಟೀಕಾರ್ ಅಧ್ಯಕ್ಷರು, ಅಂಬೇಡ್ಕರ್ ಯುವ ಸೇನೆ ಮುಧೋಳ ರವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ತದ ನಂತರ ಶಿಕ್ಷಕರ ಕುರಿತು ಮಾತನಾಡಿ ಕಠಿಣಶ್ರಮ, ನಿಷ್ಠೆ, ಸೇವಾಭಾವನೆ ಹಾಗೂ ವಿದ್ಯಾರ್ಥಿಗಳಿಗೆ ನೀಡಿದ ಅಮೂಲ್ಯ ಮಾರ್ಗದರ್ಶನವೇ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕರಾಗಿ ಶ್ರೀ ಬಷೀರ್ ಅಹ್ಮದ್ ರವರು ಆಯ್ಕೆಯಾಗಲು ಕಾರಣವಾಗಿದೆ ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ನರೇಶ್ ಎ ನಾಟೀಕಾರ್ ತಮ್ಮ ಅಭಿಪ್ರಾಯ ತಿಳಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















