ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿರಗೂರ ಗ್ರಾಮದಲ್ಲಿ ಗಣೇಶ ಮೂರ್ತಿ ಅದ್ದೂರಿ ವಿಸರ್ಜನೆ ಮೆರವಣಿಗೆ

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಿರಗೂರ ಗ್ರಾಮದಲ್ಲಿ ಮನೆ, ಅಂಗಡಿ, ಕಟ್ಟಡಗಳ ಮೇಲೆ ನಿಂತು ಗಣೇಶ ವೈಭವದ ವೀಕ್ಷಣೆ |

ಸಾವಿರಾರು ಭಕ್ತರ ಸಮ್ಮುಖದಲ್ಲಿ ಭೀಮಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ.

ಇಂಡಿ, ಜೈ ಶ್ರೀ ರಾಮ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ ಶಿರಗೂರ ಗ್ರಾಮದ ಗಣೇಶ್ ವಿಗ್ರಹವನ್ನು ಶುಕ್ರವಾರ ಸಂಜೆ ಅದ್ದೂರಿಯಾಗಿ ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು.

ತೊಳನೂರ ಸಿದ್ದೇಶ್ವರ ಮ್ಯಾಜಿಕ್ ಪಾರ್ಟಿ ಡಿಜೆ ಸೌಂಡ್ ಸಿಸ್ಟಮ್‌ನ ಮೂಲಕ ಸಿದ್ದರಾಯ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಬಡಾವಣೆ ರಸ್ತೆ ಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿತು.

ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಶಾಲಾ ಮಕ್ಕಳಿಂದ ಕೋಲಾಟ ಕುಣಿಸುವ, ಯುವಕರು, ವಯಸ್ಕರು, ಮಹಿಳೆಯರು, ಹಾಡಿಗೆ ಹೆಜ್ಜೆ ಹಾಕಿದರು.

ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪುರುಷರು ಭಾಗವಹಿಸುವ ಮೂಲಕ ವಿವಿಧ ಗೀತೆಗಳು, ಗಣೇಶ ಸ್ಮರಣೆ, ಗಣೇಶನ ಜಯ ಘೋಷಣೆ ಹಾಕುತ್ತಾ ಕುಣಿದು ಕುಪ್ಪಳಿಸಿದರು.

ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವ ಜನ ಒಂದಡೆಯಾದರೆ, ಗಣೇಶ ವಿಸರ್ಜನೆಯ ಅವಿಸ್ಮರಣಿಯ ದೃಶ್ಯ ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚು ಜನ ಗಣೇಶ್ ನೋಡಲು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

ಶ್ರೀ ಜೈ ಶ್ರೀರಾಮ ಯುವಕ ಮಂಡಳಿ
ನೀಲವ ಕಾರ್ಯಕ್ರಮದ ಪಟ್ಟಿ ವಿವರ

ಸತ್ಯನಾರಾಯಣ ಪೂಜೆ ತೆಂಗಿನಕಾಯಿ ಶ್ರೀಶೈಲ ನಾವದಗಿ 2001 ರೂ. ,ಸತ್ಯನಾರಾಯಣ ಪೂಜೆ ಸಲ್ಲಿಸಿದ ಫಲ ,ಸೋಮಯ್ಯ ಹೀರೆಮಠ 1001 ರೂ, ಗಣಪತಿ ಪೂಜೆ ಸಲ್ಲಿಸಿದ ತೆಂಗಿನಕಾಯಿ, ಸುರೇಶ ಪೂಜಾರಿ 4001 ರೂ. ಗಣಪತಿ ಪೂಜೆ ಸಲ್ಲಿಸಿದ ಫಲ, ಮಂಜುನಾಥ್ ನಾವದಗಿ 2001 ರೂ. ಗಣಪತಿ ಕೊರಳಲ್ಲಿನ ಹಾರ ಶಿವನಂದ ಕೋಳಿ 3201 ರೂ. ಗಣಪತಿ ಕೊರಳಲ್ಲಿನ ಮುತ್ತಿನ ಹಾರ , ಭೀಮಾಶಂಕರ ಪೂಜಾರಿ 5001 ರೂ. ಗಣಪತಿ ಹಣೆಪಟ್ಟಿಯಾದ ಕಿರೀಟ , ಸೋಮಯ್ಯ ಹಿರೇಮಠ 1500ರೂ. ಗಣಪತಿ ಪಟ್ಟಿಗೆಂದು ಬಳಸಿದ ಪೆನ್ನು ಭೂತಳಿ ಪೂಜಾರಿ 4001 ರೂ. ಹೀಗೆ ಗ್ರಾಮಸ್ಥರು ನಿಲವ ಎಂದು ತೆಗೆದುಕೊಂಡಿದ್ದು ನಿಲವ ಕಾರ್ಯಕ್ರಮದಲ್ಲಿ ಒಟ್ಟು ಸಂಗ್ರಹಿಸಿದ ಹಣ 22,700 ರೂಪಾಯಿಗಳು.

ಗಣೇಶ ವಿಸರ್ಜನೆ ಕೇವಲ ಸಂಪ್ರದಾಯವಲ್ಲ, ಇದು ಗ್ರಾಮಸ್ಥರ ಏಕತೆ, ಶ್ರದ್ಧೆ ಮತ್ತು ಸಂತಸದ ಪ್ರತೀಕವಾಗಿದ್ದು, ನಾವು ನಡೆಸುವ ಮೆರವಣಿಗೆ ನಮ್ಮ ಪರಂಪರೆಯ ಶಕ್ತಿ ಮತ್ತು ನಾವು ಪ್ರತಿವರ್ಷ ಗ್ರಾಮಸ್ಥರ ಒಗ್ಗಟ್ಟಿನಿಂದ ಗಣೇಶ ವಿಸರ್ಜನೆ ಮೆರವಣಿಗೆ ಮಾಡುತ್ತವೆ.

— ಶಿವಾನಂದ ಕೋಳಿ
ಜೈ ಶ್ರೀರಾಮ ಯುವಕ ಮಂಡಳಿ ಅಧ್ಯಕ್ಷ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!