ಬಳ್ಳಾರಿ / ಕಂಪ್ಲಿ : ಈದ್ ಮಿಲಾದ್ ಹಬ್ಬದ ಪ್ರಯುಕ್ತ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಪಟ್ಟಣದ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಹಾಗೂ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ಮುಸ್ಲಿಂ ಧರ್ಮಗುರು ಸೈಯ್ಯದ್‌ಷಾಹ್ ಅಬುಲ್ ಹಸನ್ ಖಾದ್ರಿ ಉರ್ಫ್ ಆಜಂ ಪಾಷ ಸಾಹೇಬ್ ಸಜ್ಜಾದೆ ನಶೀನ್‌ರವರು ಮಾತನಾಡಿ ಶಾಂತಿ ಸಂದೇಶ ಸಾರುವ ಪ್ರವಾದಿ ಮಹ್ಮದ್ ಪೈಗಂಬರರು ಬಡವರ ಮತ್ತು ರೋಗಿಗಳ ಸಹಾಯವನ್ನು ಮಾಡಲು ಮುಂದಾಗುವುದರ ಜೊತೆಗೆ ಬಡವರ ಬಗ್ಗೆ ಕಾಳಜಿಯನ್ನು ಹೊಂದಿದರು. ಇಂತಹ ಕಾರ್ಯವನ್ನು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಟ್ರಸ್ಟ್ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇವರ ಕಾರ್ಯಗಳು ಹೀಗೆಯೆ ಸಾಗಲಿ ಎಂದು ಶುಭಾ ಹಾರೈಸಿದರು. ನಂತರ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಟ್ರಸ್ಟ್ ನ ಉಪಾಧ್ಯಕ್ಷ ಎಸ್.ಕೆ. ಇಮ್ತಿಯಾಜ್ ಮಾತಾನಾಡಿ ಸರ್ವ ಮಾನವಜನಾಂಗಕ್ಕೆ ಕರುಣೆಯ ದಾರಿ ತೋರಿದ ಪ್ರವಾದಿಗಳು ಅನಾಥರ ತಬ್ಬಲಿಗಳ ಅಸರೆಯಾಗಿ ಎಂದು ಹೇಳಿದ್ದಾರೆ. ನಮ್ಮ ಟ್ರಸ್ಟ್ ನ ವತಿಯಿಂದ ಇನ್ನು ಅನೇಕ ಸಮಮಾಜಮುಖಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಧರ್ಮಗುರುಳಾದ ಸೈಯದ್ ಷಾ ಅಬುತರಾಬ್ ಖಾದ್ರಿ, ಸೈಯದ್ ಷಾ ಚಾಂದ್ ಪಾಷಾ ಖಾದ್ರಿ, ಸೈಯದ್ ಷಾ ಡಾ.ನೂರ್ ಅಹ್ಮದ್ ಖಾದ್ರಿ, ಸೈಯದ್ ಷಾ ಉಮೇಸ್ ಸಾಹೇಬ್ ಖಾದ್ರಿ, ಮತಿನ್ ಸಾಹೇಬ್ ಖಾದ್ರಿ, ಆರೋಗ್ಯ ಇಲಾಖೆಯ ಚೆನ್ನಬಸವರಾಜ, ಪ್ರಮಖರಾದ ಎಸ್. ಕೆ. ಅಜುರುದ್ದಿನ್, ಬಡೀಗೇರ ಜಿಲಾನಸಾಬ್, ಕಡಪ ಮಸ್ತಾನವಲಿ. ಎಂ.ಎಸ್. ಮುನ್ನಾ, ಕೆ. ಮೆಹೆಬುಬ್, ಅರ್. ಸುಭಾನ್, ಅರ್. ಜಿಲಾನ್, ಎ.ಎಸ್. ಯಲ್ಲಪ, ಬಡಿಗೇರ ಅಜೀಜ್‌ಸಾಬ್, ಎನ್. ಅಕ್ಬರ್, ಜಹೀರುದ್ದಿನ್, ಮೈನು, ರಾಘವೇಂದ್ರ, ಹಾಗೂ ರಂಜಿತ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















