ಬಳ್ಳಾರಿ / ಕಂಪ್ಲಿ : ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಆರ್ಹ ಫಲಾನುಭವಿಗಳಿಗೆ ಅಧಿಕಾರಿಗಳು ತಲುಪಿಸಲು ಮುಂದಾಗಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ. ಶ್ರೀನಿವಾಸರಾವ್ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಯಲ್ಲಮ್ಮ ಕ್ಯಾಂಪಿನಲ್ಲಿರುವ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ. ತಾಲೂಕಿನಲ್ಲಿ ಗೃಹಜೋತಿ ಯುವನಿಧಿ ಶಕ್ತಿಯೋಜನೆ ಅನ್ನಭಾಗ್ಯ ಗೃಹಲಕ್ಷಿ ಯೋಜನೆಗಳನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. ಇನ್ನುಳಿದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ತಮ್ಮ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಡಿತರ ಪಡೆಯುವ ಕೆಲವರಿಗೆ ಬಯೋಮೆಟ್ರಿಕ್ ಸಮಸ್ಯೆ ಎದುರಾಗಿದ್ದು, ಅಂಥವರು ತಮ್ಮ ಆಧಾರಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯ. ಇಕೆವೈಸಿ ನ್ಯಾಯಬೆಲೆ ಅಂಗಡಿಯಲ್ಲಿಯೇ ಮಾಡುತ್ತಿದ್ದು,ಸದುಪಯೋಗ ಪಡೆಯುವಂತೆ ಅಧಿಕಾರಿಗಳು ತಿಳಿಸಿದರು.
ಆಡಳಿತಸೌಧ, ತಾಲ್ಲೂಕು ಪಂಚಾಯತಿ ಕಚೇರಿ ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹತ್ತಿರ ಬಸ್ಸುಗಳ ನಿಲುಗಡೆಗೆ ಮತ್ತು ಕಂಪ್ಲಿ-ಸುಗ್ಗೇನಹಳ್ಳಿ ಬಸ್ನ್ನು ಜೀರಿಗನೂರು ಗ್ರಾಮಕ್ಕೆ ವಿಸ್ತರಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಗೃಹಜ್ಯೋತಿ ಯೋಜನೆಯಡಿ 1444ಜನ ನೋಂದಣಿ ಮಾಡಿಕೊಂಡಿರದ ಬಗ್ಗೆ ಚರ್ಚೆಗೆ ಬಂದಾಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಗತಿ ಪಟ್ಟಿ ಕೊಡುಬೇಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪರೀಶೀಲನಾ ಸಭೆ ಕರೆಯಬೇಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ಸೂಚಿಸಿದರು.
ಇದೇ ವಿಷಯವನ್ನು ಕುರಿತಂತೆ ತಾಲ್ಲೂಕು ಪಂಚಾಯತಿ ಇಒ ಆರ್.ಕೆ.ಶ್ರೀಕುಮಾರ್ ಸ್ಥಳ ಗುರುತಿಸಿ ಆರ್ಆರ್ ನಂಬರ್ ಮಾಹಿತಿ ನೀಡುವಂತೆಯೂ ತಿಳಿಸಿದರು.
ಅಂಗನವಾಡಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾಗುತ್ತಿರುವ ಮತ್ತು ಯುವನಿಧಿ, ಗೃಹಲಕ್ಷಿ, ಶಕ್ತಿ ಯೋಜನೆ ಕುರಿತಂತೆ ಚರ್ಚೆ ನಡೆಯಿತು. ಸಭೆಯಲ್ಲಿ ತಾ.ಪಂ.ಮನರೇಗಾ ಸಹಾಯ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಸಮಿತಿ ಸದಸ್ಯರಾದ ಶಿವಕುಮಾರ, ಸಿ.ವಿಜಯಲಕ್ಷ್ಮಿ, ಶಿವರಾಜಕುಮಾರ್, ವಿ.ರಮೇಶ್,ಮಂಜುನಾಥ, ವೀರಭದ್ರಗೌಡ, ರೇಣುಕಮ್ಮ, ಕರಿಯಪ್ಪ, ಎಂ.ವೀರೇಶ್, ಎ.ರಾಜಾಭಕ್ಷಿ, ಲಕ್ಷ್ಮಿ , ಗ್ರಾಮ ಪಂಚಾಯತಿ ಪಿಡಿಒಗಳು, ತಾ.ಪಂ. ಸಿಬ್ಬಂದಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















