ಯಾದಗಿರಿ/ ಗುರುಮಠಕಲ್: ಸೆ.೧೦ ಪಟ್ಟಣದ ತಾಲೂಕ ಸಮುದಾಯ ಆರೋಗ್ಯ ಕೇಂದ್ರದ ಎನ್ ಸಿ ಡಿ ಘಟಕದ ಸಿಬ್ಬಂದಿ ವತಿಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಇಂದಿರಾನಗರ ಬಡಾವಣೆ ನಿವಾಸಿಗಳಿಗಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಕ್ತದೊತ್ತಡ, ಮಧುಮೇಹ, ಗರ್ಭಿಣಿ ಸ್ತ್ರೀಯರ ಆರೋಗ್ಯ ಶಿಬಿರದಲ್ಲಿ ತಪಾಸಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಇಲಾಖೆಯ ಎನ್ ಸಿ ಡಿ ವೈದ್ಯರಾದ ಡಾ. ಈಶ್ವರ್ ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ ಇವತ್ತಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಬೇಕು, ನಮ್ಮ ಆರೋಗ್ಯ ಹಿತ ದೃಷ್ಟಿಯಿಂದ ನೀರನ್ನು ಕಾಯಿಸಿ ಕುಡಿಯಬೇಕು ಎಂದು ಹೇಳಿದರು.
ಇವತ್ತಿನ ಆರೋಗ್ಯ ತಪಾಸಣೆ ಶಿಬಿರದಲ್ಲಿ ಕಾರ್ಯಕ್ರಮದಲ್ಲಿ ಎಚ್ಐಓ ಪ್ರಶಾಂತ್, ಎನ್ ಸಿಡಿ ಶೂಶ್ರುಕಿ ಅಧಿಕಾರಿಗಳಾದ ರೇಣುಕಾ, ಪ್ರಯೋಗ ಶಾಲಾ ಅಧಿಕಾರಿಗಳು ಜ್ಯೋತಿಲಕ್ಷ್ಮಿ, ಆಪ್ತ ಸಮಾಲೋಚಕರು ಮಹಾಲಕ್ಷ್ಮಿ ಮತ್ತು ಗಣಕಯಂತ್ರ ಸಹಾಯಕ ವೆಂಕಟೇಶ್ ಮತ್ತು ನಮ್ಮ ಕ್ಲಿನಿಕ್ ನ ವೈದ್ಯರು ಮತ್ತು ಸಿಬ್ಬಂದಿಗಳು ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















