ಬಳ್ಳಾರಿ / ಕಂಪ್ಲಿ : ಇತ್ತಿಚೆಗೆ ಚಿತ್ರದುರ್ಗದಲ್ಲಿ ಗ್ಯಾಲಕ್ಸಿ ಎಜುಕೇಷನ್ ಇನ್ನೋವೇಶನ್ ಸಂಸ್ಥೆಯು ಏರ್ಪಡಿಸಿದ್ದ ಅಬಾಕಸ್ ಗಣಿತ ಸ್ಪರ್ಧೆಯಲ್ಲಿ ಕಂಪ್ಲಿಯ ಶ್ರೀ ವಿದ್ಯಾಸಾಗರ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆಂದು ಶ್ರೀವಿದ್ಯಾಸಾಗರ ಇಂಟರ್ನ್ಯಾಸಷನಲ್ ಶಾಲೆಯ ಕಾರ್ಯದರ್ಶಿ ಪಿ. ನಾಗೇಶ್ವರಾವ್ ತಿಳಿಸಿದರು.
ಅವರು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಪದಕ ಹಾಗೂ ಪಾರಿತೋಷಕಗಳನ್ನು ವಿತರಿಸ ಮಾತನಾಡಿ ಅಬಾಕಸ್ ತರಬೇತಿ ಕೇಂದ್ರವಾದ ಚಿತ್ರದುರ್ಗದ ಗ್ಯಾಲಕ್ಸಿ ಎಜ್ಯುಕೇಷನ್ ಇನ್ನೋವೇಶನ್ “ಕ್ವಿಕ್ ಮೈಂಡ್ ಕ್ವಿಕ್ ಫೈಂಡ್” ಎನ್ನುವ ಧ್ಯೇಯ್ಯವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ.ಈ ತರಬೇತಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗಣಿತ ಕೌಶಲ್ಯ ಮತ್ತು ವೇಗದ ಲೆಕ್ಕಾಚಾರದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಇಂತಹ ಪ್ರೇರಣಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದರು.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಪಿ. ನಾಗೇಶ್ವರ ರಾವ್, ಪ್ರಾಂಶುಪಾಲರಾದ ಸಾಯಿ ಕಿಶೋರ್ ಪಾಲೇಟಿ, ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















