ಬಳ್ಳಾರಿ / ಕಂಪ್ಲಿ : ಇಂದಿನ ಸಮಾಜಕ್ಕೆ ಬುದ್ಧನ ತತ್ವ, ಆದರ್ಶ ಅಗತ್ಯವಾಗಿದ್ದು, ಬುದ್ಧ ಸಮಾಜದ ಏಳಿಗೆಗೆ ಅಹಿಂಸಾ ಮಾರ್ಗಗಳನ್ನು ಜಾರಿಗೆ ತಂದಿದ್ದಾರೆ. ಅವರ ಚಿಂತನೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ನಡೆದರೆ, ಬದುಕು ಉತ್ತಮವಾಗಿರುತ್ತದೆ ಎಂದು ಎಂದು ಕರ್ನಾಟಕ ಬೌದ್ಧ ಸಮಾಜದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಪಿಸಿ ಅಂಜಿನಪ್ಪ ಹೇಳಿದರು.
ಪ್ರತಿ ಹುಣ್ಣಿಮೆ ಬೌದ್ಧ ಪೂರ್ಣಮಿಯಾಗಿ ಆಚರಿಸಿಕೊಂಡು ಬಂದಿರುವ ಕರ್ನಾಟಕ ಬೌದ್ಧ ಸಮಾಜದ ವತಿಯಿಂದ ಇಲ್ಲಿನ ಶುಗರ್ ಫ್ಯಾಕ್ಟರಿಯ ಶಾರುಕ್ ಇಂಜಿನಿಯರ್ ಮುಸ್ಲಿಂ ಬಾಂಧವರ ಮನೆಯಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸಮುದಾಯಗಳು ಪ್ರೀತಿ, ಕರುಣೆ, ಸಹೋದರತೆ ಜೊತೆಗೆ ಸಮಾನತೆ ಮೈತ್ರಿಯನ್ನು ಸಾರುವ ಬೌದ್ಧ ಧರ್ಮದ ವೈಚಾರಿಕತೆಗಳನ್ನು ಪ್ರತಿಯೊಬ್ಬರು ಪಾಲಿಸಬಹುದು ಎಂದರು.
ಅಂಗವಾಗಿ ಪಿಹೆಚ್‌ಡಿ ಪಡೆದು ಹೆಮ್ಮೆ ಬೀರಿದ ರಾಜ್ಯ ಮಕ್ಕಳ ಆಯೋಗದ ನಿಕಟಪೂರ್ವ ಸದಸ್ಯರಾದ ಡಾಕ್ಟರ್ ಎಚ್.ಸಿ ರಾಘವೇಂದ್ರ, ಹಾಗೂ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಟಿ. ಎಚ್. ಎಂ ರಾಜಕುಮಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಮೀನಾ ಇವರು ಭೀಮ ಗೀತೆಯನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಕಂಪ್ಲಿ ಬಾಲಕರ ಪದವಿಪೂರ್ವ ಕಾಲೇಜಿನ ಅಧ್ಯಾಪಕರಾದ ಸಿದ್ದಣ್ಣ ಪರಮೇಶ್ವರ್, ಪಿ.ಸಿ ಉಮೇಶ್, ಸುಧಾಕರ್ ಆದಿಮನೆ, ಹೈಸ್ಕೂಲ್ ಶಿಕ್ಷಕರದ ಯೋಗರಾಜ್, ರಮೇಶ್, ಉಮೇಶ್, ಮಂಜುನಾಥ, ಸಿದ್ದಿ ಹರ್ಷ, ಹೆಚ್ ರಾಜಶೇಖರ್, ಶಿವರಾಜ್, ಸಿ.ಎಸ್ ವಿರೂಪಾಕ್ಷಿ, ರಾಜಶೇಖರ್, ಪಂಪಾಪತಿ, ರಾಜು, ಗ್ಯಾರೇಜ್ ಮೈನುದ್ದಿನ್, ರೇಷ್ಮಾ, ರಾಜ್ಯಲಕ್ಷ್ಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















