ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ “ಸಾರ್ವಜನಿಕ ಪ್ರಕಟಣೆ”
ವಿಜಯಪುರ ಜಿಲ್ಲೆಯ ಇಂಡಿ ವಿಭಾಗದ ವ್ಯಾಪ್ತಿಯ ಉಪ-ವಿಭಾಗ ಇಂಡಿ, ಚಡಚಣ, ಸಿಂದಗಿ, ದೇವರಹಿಪ್ಪರಗಿ ಹಾಗೂ ಲೆಕ್ಕಪತ್ರ ಶಾಖೆ ಕೋರವಾರ, ಆಲಮೇಲ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ತಮ್ಮ ಮನೆಯ, ಅಂಗಡಿ ಮತ್ತು ಕೈಗಾರಿಕೆಗಳ ವಿದ್ಯುತ್ ಬಾಕಿ ಪಾವತಿಸದೇ ಇದ್ದಲ್ಲಿ ಕೂಡಲೇ ಹತ್ತಿರ ಇರುವ ವಿದ್ಯುತ್ ಇಲಾಖೆಯ ಕಛೇರಿಗೆ ಹೋಗಿ ತಮ್ಮ ಬಾಕಿ ಮೊತ್ತವನ್ನು ಪಾವತಿ ಮಾಡಬೇಕು.
ದಿನಾಂಕ: 15-09-2025 ರಿಂದ 30-09-2025 ರವರೆಗೆ ವಿಶೇಷ ವಿದ್ಯುತ್ ನಿಲುಗಡೆ “ಡಿಸ್ ಡ್ರೈವ್” ಹಮ್ಮಿಕೊಳ್ಳಲಾಗಿದೆ ಬಾಕಿ ಮೊತ್ತ ಪಾವತಿಸದೇ ಇರುವ ಸ್ಥಾವರಗಳಿಗೆ ಯಾವುದೇ ಮುನ್ಸೂಚನೆ ನೀಡದೇ ವಿದ್ಯುತ್ ನಿಲುಗಡೆ ಮಾಡಲಾಗುವುದು. ವಿದ್ಯುತ್ ನಿಲುಗಡೆ ನಂತರ ಬಾಕಿ ಮೊತ್ತ ಹಾಗೂ “ಡಿ & ಆರ್” ಫೀ ಪೂರ್ಣ ಪಾವತಿಸಿದ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಸರಕಾರಿ ಇಲಾಖೆಯ ಕಛೇರಿ ಹಾಗೂ ವಸತಿ ಗ್ರಹಗಳ ಬಾಕಿ ಇದ್ದಲ್ಲಿ ಕೂಡಲೇ ಪಾವತಿಸುವುದು, ಪಾವತಿಸದೇ ಇದ್ದಲ್ಲಿ ಅನಿವಾರ್ಯವಾಗಿ ವಿದ್ಯುತ್ ನಿಲುಗಡೆಗೆ ಕ್ರಮ ಜರುಗಿಸಲಾಗುವುದು ಆದ್ದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸಂಬಂಧಿಸಿರುವ ಇಲಾಖೆಯವರೆ ಕಾರಣರಾಗುವಿರಿ.
ವಿದ್ಯುತ್ ಬಿಲ್ಲನ್ನು ಪಾವತಿಸಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಾ ಮತ್ತು ಪಾ ವಿಭಾಗ ಹೆಸ್ಕಾಂ ಇಂಡಿ ಇವರು ತಿಳಿಸಿರುತ್ತಾರೆ.
- ಕರುನಾಡ ಕಂದ



















