ಶಿವಮೊಗ್ಗ/ ತೀರ್ಥಹಳ್ಳಿ: ಕರುಕುಚ್ಚಿ ಕಲ್ಲುಕೊಪ್ಪ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ನಿರ್ದೇಶಕ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಆರ್ ಎಂ ಮಂಜುನಾಥ ಗೌಡರು ಭಾಗವಹಿಸಿ ಮಾತನಾಡಿದರು.
ಸಂಘದ ಅಧ್ಯಕ್ಷರು ಶ್ರೀ ಲೋಕೇಶ್ ಕರಕುಚ್ಚಿ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿಗಳು ನಮ್ಮೂರಿನ ಅಳಿಯಂದಿರು ಆಗಿರುವ ಶ್ರೀ ರಾಮಪ್ಪ ದಂಪತಿಗಳನ್ನು ಹಾಗೂ ಆತ್ಮೀಯರು ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಎಂ ಶ್ರೀಕಾಂತ್ ಅವರನ್ನು ವಿಶೇಷವಾಗಿ ಸಾರ್ವಜನಿಕ ಸೇವೆಗಾಗಿ ಸನ್ಮಾನಿಸಲಾಯಿತು.
ಊರಿನ ಪರವಾಗಿ ವೇದಿಕೆಯಲ್ಲಿ ಶಿಮುಲ್ ಅಧ್ಯಕ್ಷರು ಶ್ರೀ ಗುರುಶಕ್ತಿ ವಿದ್ಯಾಧರ್ ನಿರ್ದೇಶಕರುಗಳಾದ ಆನಂದ್ ದಿನೇಶ್ ಹಾಗೂ ಮಹಾಲಿಂಗ ಶಾಸ್ತ್ರಿಗಳು ಚಿತ್ರದುರ್ಗದ ನಿರ್ದೇಶಕರಾದ ರೇವಣ್ಣ ಸಿದ್ದಪ್ಪ ಶಿಮಲ್ ಅಧಿಕಾರಿ ದೀಪಿಕಾ ಮತ್ತು ನಮ್ಮ ಸಂಘದ ಎಲ್ಲಾ ಗೌರವಾನ್ವಿತ ನಿರ್ದೇಶಕರು ಉಪಸ್ಥಿತಿ ಇದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್



















