ಯಾದಗಿರಿ/ ಶಹಾಪುರ : ತಾಲೂಕಿನ ಸಗರದ ನಾಗಠಾಣ ಹಿರೇಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವರ್ತಮಾನ ಹಾಗೂ ದ್ವಾದಶಿ ಶ್ರೀಗಳ ಪಟ್ಟಾಧಿಕಾರ ಮತ್ತು ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮಗಳ ಕುರಿತಾದ ಪೂರ್ವಭಾವಿ ಸಭೆ ನಿನ್ನೆ ಜರುಗಿತು.
ಈ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತಾನಾಡಿದ ನಾಗಠಾಣ ಹಿರೇಮಠದ ಪರಮ ಪೂಜ್ಯ ಶ್ರೀ ಸೋಮೇಶ್ವರ ಶಿವಾಚಾರ್ಯರು ನವೆಂಬರ್ ತಿಂಗಳಿನಲ್ಲಿ 2 ರಿಂದ 20 ನೇಯ ತಾರೀಖಿನ ವರೆಗೆ ಜರುಗುವ ರಂಭಾಪುರಿ ಶ್ರೀಗಳ ಅಡ್ಡ ಪಲ್ಲಕ್ಕಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀ ಮಠದ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು
ಈ ಪೂರ್ವಭಾವಿ ಸಭೆಯಲ್ಲಿ ವೇ. ಮಡಿವಾಳಯ್ಯ ಶಾಸ್ತ್ರಿಗಳು, ಮಲ್ಲಿಕಾರ್ಜುನ ಹಿರೇಮಠ, ಶಿವಾನಂದ ಬೂದಿ, ಆನಂದ ಬೂದಿ, ಭದ್ರಯ್ಯ ಸ್ವಾಮಿ ಗದ್ವಾಲ್, ಶಂಕ್ರಯ್ಯಸ್ವಾಮಿ ಸಾಲಿಮಠ, ವಿಜಯ ಹಿರೇಮಠ, ಶಿವಕುಮಾರ ಗದ್ವಾಲ್, ರವಿ ಅಡ್ಕಿ, ರವಿ ಪೋತುಲ್, ಬನದೇಶ ವಸ್ತ್ರದ, ವಿನಾಯಕ ಜನಾರ್ಧನ ಸೇರಿದಂತೆ ಗ್ರಾಮದ ಸರ್ವಸದ್ಭಕ್ತರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















