ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಿಜಕಲ್ಲ ಶಾಲೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ
ಬಿಜಕಲ್ಲ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ವಿಶ್ವಕರ್ಮ ಬಾಂಧವರು ಭಕ್ತಿಭಾವದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು.

ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಗ್ಯಾನಪ್ಪ ರಾಮಪುರ ಉದ್ಘಾಟಿಸಿ ಮಾತನಾಡಿ – “ವಿಶ್ವಕರ್ಮನು ವಿಶ್ವದ ಶಿಲ್ಪಿ, ವಿಜ್ಞಾನ, ಕಲೆ, ಕೌಶಲ್ಯಗಳ ಪ್ರತೀಕ. ವಿದ್ಯಾರ್ಥಿಗಳು ಶ್ರಮ ಮತ್ತು ಸೃಜನಶೀಲತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹಿತೋಪದೇಶ ನೀಡಿದರು.

ಗ್ರಾಮ ಪಂಚಾಯಿತಿ ಪಿಡಿಒ ಆನಂದ ರಾವ್ ಕುಲಕರ್ಣಿ ಅವರು ವಿಶ್ವಕರ್ಮ ದೇವಶಿಲ್ಪಿ ಅಮರಾವತಿ, ದ್ವಾರಕಾ, ಕುಬೇರನ ಪುಷ್ಪಕ ವಿಮಾನಗಳನ್ನು ತಯಾರಿಸಿದ ವೇದಕಾಲದ ದೇವಲೋಕದ ಇಂಜಿನಿಯರ್ ಎಂದು ಹೆಳಿದರು. ಸದಸ್ಯರು, ಶಾಲಾ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು ಹಾಗೂ ಪೋಷಕರು ಪಾಲ್ಗೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ವಿದ್ಯಾರ್ಥಿಗಳಿಗೆ ವಿಶ್ವಕರ್ಮರ ಜೀವನ, ಕೌಶಲ್ಯ ಹಾಗೂ ತತ್ವಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಶಿಕ್ಷಕರು ಮಕ್ಕಳಲ್ಲಿ ಸೃಜನಾತ್ಮಕತೆಯ ಬೆಳೆಯುವಿಕೆಗೆ ಇಂತಹ ಹಬ್ಬಗಳು ದಾರಿ ಮಾಡಿಕೊಡುತ್ತವೆ ಎಂದು ಅಭಿಪ್ರಾಯಪಟ್ಟರು.

ಕೊನೆಯಲ್ಲಿ ವಿಶ್ವಕರ್ಮನಿಗೆ ಪೂಜೆ ಸಲ್ಲಿಸಿ, ಶಾಲಾ ಮಕ್ಕಳಿಗೆ ಮತ್ತು ಎಲ್ಲರಿಗೂ ಸಿಹಿ ಮತ್ತು ಉಪಹಾರ ವಿತರಿಸಲಾಯಿತು.

ಕಾರ್ಯಕ್ರದಲ್ಲಿ ಮನೋಹರ ಬಡಿಗೇರ, ಮಲ್ಲಿಕಾರ್ಜುನ ಕಮ್ಮಾರ, ಪ್ರಕಾಶ ಬಡಿಗೇರ, ರಾಮಚಂದ್ರ ಕಮ್ಮಾರ, ಮೌನೇಶ ಬಡಿಗೇರ, ಕುಂಟೆಪ್ಪ ತಳವಾರ, ಮಂಜುನಾಥ ಬೆಳಗಲ್ಲ, ಚಂದ್ರಶೇಖರ ಅಡೆವೆಪ್ಪಗೌಡರ, ಆನಂದ ತಳುವಗೇರಿ ಹಾಗೂ ಗ್ರಾಮದ ಗುರು ಹಿರಿಯರು ಯುವಕರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!