ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯನ್ನು ಇದೇ ದಿ. 22-09-2025 ರಿಂದ ಅಕ್ಟೋಬರ್ 7ರ ವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಕಂಪ್ಲಿ ಮತಾಂಗ ಸಮುದಾಯದ ಮುಖಂಡರು ಶ್ರೀ ಹೆಚ್. ಕುಮಾರಸ್ವಾಮಿ ತಿಳಿಸಿದರು. ಈ ಕುರಿತು ಅವರು ಮಾಧ್ಯಮಗಳ ಮೂಲಕ ಮಾತನಾಡಿ ಈ ಸಮೀಕ್ಷೆಯಲ್ಲಿ ಕ್ರಮ ಸಂಖ್ಯೆ 061 09ಮಾದಿಗ ಜಾತಿಗಳು ಮತ್ತು 061 ಕಲಾಂ ನಲ್ಲಿ 10 ಉಪಜಾತಿ ರಲ್ಲಿ ಮಾದಿಗ ಎಂದೇ ಬರೆಸಿ ಕ್ರಮ ಸಂಖ್ಯೆ 061ರಲ್ಲಿ ಮಾದಿಗ ಜಾತಿ ಗಳನ್ನು ನಮೂದಿಸಬೇಕು ಸಮುದಾಯದ ಪರ್ಯಾಯ ಪದಗಳನ್ನು ಬರೆಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೆ ಮಾದಿಗ ಎಂದು ಗುರುತಿಸಲಾಗುತ್ತಿದೆ ಈ ಜಿಲ್ಲೆಗಳಲ್ಲಿ ಮಾದಿಗ ಎಂದು ಬರೆಸಬೇಕು ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಧಾರ ಕಾರ್ಡಿಗೆ ಕಡ್ಡಾಯವಾಗಿ ನಮೂದಿಸಿ ಎಂದು ಕಂಪ್ಲಿ ತಾಲೂಕ ಮತಾಂಗ (ಮಾದಿಗ) ಸಮುದಾಯದ ಮುಖಂಡರು ಗ್ರಾಮಪಂಚಾಯಿತಿ ಸದಸ್ಯರು ಶ್ರೀ ಹೆಚ್. ಕುಮಾರಸ್ವಾಮಿ ಕಂಪ್ಲಿ ತಾಲೂಕಿನ ಎಲ್ಲಾ ಮಾದಿಗರಿಗೆ ಈ ಮೂಲಕ ಮನವಿ ಮಾಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















