
ಬಳ್ಳಾರಿ / ಕಂಪ್ಲಿ : ಪಟ್ಟಣದ ಕಂಪ್ಲಿ ವಲಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ರೈನ್ಬೊ ಗ್ಲೋಬಲ್ ಸ್ಕೂಲ್ ಅಂಡ್ ಕಾಲೇಜ್ ನಲ್ಲಿ ಹಮ್ಮಿಕೊಂಡಿದ್ದು ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ಅಜೀಜ್ ರವರು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ದುಶ್ಚಟಮುಕ್ತವಾಗಿ ಮಾಡಲು ಪರಮ ಪೂಜ್ಯರ ಕೊಡುಗೆ ಅವರ ಆಲೋಚನೆಗಳು ತುಂಬಾ ಉನ್ನತಮಟ್ಟದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಬಡಿಗೇರ್ ಜಿಲಾನಸಾಬ್ ಮಾತನಾಡಿ ಅತಿಯಾದರೆ ಅಮೃತವೂ ವಿಷ ಎಂದು ಹೇಳುತ್ತಾರೆ. ಹಾಗಾಗಿ ಈ ಮಾದಕ ವಸ್ತುಗಳಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಇಂಥ ಚಟಗಳಲ್ಲಿ ಮುಖ್ಯವಾದವು ಗುಟುಕಾ, ತಂಬಾಕು, ಸಿಗರೇಟ್, ಮದ್ಯಪಾನ ಹಾಗೂ ಡ್ರಗ್ಸ್ ಸೇವನೆ .ಇಲ್ಲಿ ಡ್ರಗ್ಸ್ ಎಂದರೆ ಮಾದಕ ಉತ್ತೇಜಕ ಪದಾರ್ಥ. ಇಂಥವುಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿ ತಲುಪುತ್ತಾನೆ, ವಿದ್ಯಾರ್ಥಿಗಳೆ ಯಾವದೇ ದುಶ್ಚಟಕ್ಕೆ ಬಲಿಯಾಗದೇ ದೂರವಿರುವ ಕುರಿತು ಅದರಿಂದ ಆಗುವ ಪರಿಣಾಮಗಳ ಕುರಿತು ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು. ಇದೇ ವೇಳೆ ಮಾತನಾಡಿದ ಕಾಲೇಜಿನ ಉಪನ್ಯಾಸಕರಾದ ಜಡೇಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಉದಾಹರಣೆ ಸಹಿತ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ದುಷ್ಟಗಳನ್ನು ನಮ್ಮ ಹತ್ತಿರಕ್ಕೂ ಸಹ ಬರುವ ಹಾಗೆ ಉತ್ತಮ ಅಭ್ಯರ್ಥಿಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಈ ವಿಷಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಮೇಘಾ, ಉಪನ್ಯಾಸಕರಾದ ಸಂಶೀರ್, ಮಮದನೀಫ್, ವಲಯದ ಮೇಲ್ವಿಚಾರಕ ಎಚ್. ಮಂಜಣ್ಣ ಪ್ರತಿನಿಧಿಗಳಾದ ಮಾಲಾ ಮತ್ತು ವಾಣಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಕರುನಾಡ ಕಂದ ಪತ್ರಿಕೆ



















