ಕಾಂಗ್ರೆಸ್ ಸ್ವಾರ್ಥಕ್ಕಾಗಿ ಪ್ರತಿಭಟನೆ ಗಂಭೀರ ಆರೋಪ.
ಯಾದಗಿರಿ/ ಗುರುಮಠಕಲ್ : ಶಾಸಕ ಶರಣಗೌಡ ಕಂದಕೂರು ಅವರ ವಿರುದ್ದ ಸೆ.15 ರಂದು ಕಾಂಗ್ರೆಸ್ ಪಕ್ಷದವರು ಮಾಡಿದ ಪ್ರತಿಭಟನೆ ಕೆಲವರ ಸ್ವಾರ್ಥಕ್ಕಾಗಿ ಕೋಲಿ ಕಬ್ಬಲಿಗ ಸಮಾಜದ ಕುಲದ ಬಳಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಅನಪೂರ್ ಟೀಕಿಸಿದ್ದಾರೆ.
ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ ಕಾಂಗ್ರೆಸ್ ಹಿರಿಯ ನಾಯಕರಾದ ಭೀಮಣ್ಣ ಸಾಲಿ, ಬೋರಾಬಂಡ ಸಾಯಿಬಣ್ಣ, ಬಸರೆಡ್ಡಿ ಅನಪೂರ್ ವಿರುದ್ಧ ವಾಗ್ದಾಳಿ ಮಾಡಿದರು.
ಪಕ್ಷದ ಹಿರಿಯ ಮುಖಂಡರಾದ ಭೀಮಶಪ್ಪ ಗೂಡಸೆ ಮಾತನಾಡಿ ಮಾಡುವದಾದರೆ ಅಭಿವೃದ್ಧಿ ಹೊರಟ ಮಾಡಿ, ಅನುದಾನ ಕುರಿತಾಗಿ ಮಾತನಾಡುವ ನೀವು ನಿಮ್ಮ ಅಧಿಕಾರದಲ್ಲಿ ನಿಮ್ಮ ಮನೆಯ ಹಣ ಬಳಕೆ ಮಾಡಿದ್ದೀರ ಎಂದು ಪ್ರಶ್ನೆ ಮಾಡಿದರು.
ಬಸಣ್ಣಾ ದೇವರಳ್ಳಿ, ತಾಯಪ್ಪ ಬದ್ದೆಪಲ್ಲಿ ಮಾತನಾಡಿ ಶಾಸಕರು ಮಾಡುತ್ತಿರುವ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಮತ್ತು ಅವರ ಜನಪ್ರಿಯತೆ ಸಹಿಸಲು ಆಗದೇ ಹತಾಶರಾಗಿ ಪ್ರತಿಭಟನೆ ಮಾಡಿದ್ದಾರೆ.
ಪ್ರಜಾಸೌಧ ಕಟ್ಟಡದ ಶಂಕುಸ್ಥಾಪನೆ ವೇಳೆ, ಶಾಸಕ ನಾನಾ, ಅವನಾ ಎಂಬ ಪದ ಬಳಕೆ ಮಾಡಿರುವದು ನಮ್ಮ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಮಾತಾಡಿದ್ದೇ ವಿನಾಃ ಕಾರಣ ಕಡ್ಡಿಯನ್ನು ಗುಡ್ಡ ಮಾಡಿ ಗಲಾಟೆ ಮಾಡಲು ಮುಂದಾದಾಗ ಶಾಸಕರೇ ವೇದಿಕೆಯಲ್ಲಿ ಅದನ್ನು ಶಾಂತಗೊಳಿಸಿ, ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರಿಗೆ ಗೌರವ ನೀಡಿದ್ದಾರೆ. ಹೈ ಕಮಾಂಡ್ ಶಬ್ಬಾಸಗಿರಿ ಪಡೆಯಲು ಪ್ರತಿಭಟನೆ ಮಾಡಿರುವದು ಬಿಟ್ಟರೆ ಮತ್ಯಾವದೇ ಉದ್ದೇಶ ಇಲ್ಲ ಎಂದು ದೂರಿದ್ದಾರೆ.
ಸ್ವಪ್ರತಿಷ್ಠೆಗಾಗಿ ಹೀಗೆಲ್ಲಾ ಓರ್ವ ಜನಪ್ರತಿನಿಧಿಯನ್ನು ಅವಮಾನಿಸುವ ಕೆಲಸ ಮಾಡುವುದು ಸರಿಯಲ್ಲ, ಇವರುಗಳ ವಿರುದ್ಧ ಪ್ರತಿಭಟನೆ ಮಾಡಲು ಸ್ವತಃ ನಮ್ಮ ಶಾಸಕ ಶರಣಗೌಡ ಅವರೇ ಬೇಡ ಎಂದು ತಡೆದಿದ್ದಾರೆ, ಶಾಸಕರ ಕುಟುಂಬ ಕಾರ್ಯಕ್ರಮದಲ್ಲಿ ಹೆಲಿಕಾಪ್ಟರ್ ಮೂಲಕ ಸಿದ್ದಗಂಗಾ ಸ್ವಾಮೀಜಿಯವರು ಆಗಮಿಸಿರುವದನ್ನು ಇಲ್ಲ ಸಲ್ಲದ ಆರೋಪ ಮಾಡಿರುವ ಸಾಯಿಬಣ್ಣ ಬೋರಾಬಂಡ ಅವರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಾಲವು ನೀಡಲಿದೆ ಎಂದು ಮಲ್ಲಣ್ಣಗೌಡ ಕೌಳೂರು ಪ್ರತಿಕ್ರಿಯೆ ನೀಡಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಪೋ ಪಾಟೀಲ್, ಪ್ರಕಾಶ ನೀರೆಟಿ, ಕಿಷ್ಟಾರೆಡ್ಡಿ ಪೊಲೀಸ್ ಪಾಟೀಲ್, ನರಸಪ್ಪ ಕವಡೆ, ಈಶ್ವರ ನಾಯಕ್, ಶರಣು ಅವಂಟಿ, ನರ್ಮದಾ ಅವಂಗಪುರ್, ಲಾಲಪ್ಪ ತಲಾರಿ ಸೇರಿದಂತೆಯೇ ಇತರರಿದ್ದರು.
” ನಾನಾ, ಅವನಾ ” ಎಂಬ ಪದದಲ್ಲಿ ಅಸಂಬದ್ಧತೆ ಎಲ್ಲಿದೆ ನಾಗರತ್ನ ಅನಪೂರ್.
ಬಸರೆಡ್ಡಿ ಅನಪುರ ರವರೇ ನಿಮ್ಮಂತೆ ನಾವು ನಕಲಿ ಬೋರವೆಲ್ ಬಿಲ್ ಎತ್ತಿಲ್ಲ, ಕಂಡ ಕಂಡಲ್ಲಿ ಆಸ್ತಿ ಮಾಡುತ್ತಿರುವ ನೀವು ನಮ್ಮ ಶಾಸಕರ ಬಗ್ಗೆ ಆರೋಪ ಮಾಡುವ ಯಾವ ನೈತಿಕತೆ ಇಲ್ಲ
- ಸುಭಾಷ್ ಕಟಕಟಿ.
ವರದಿ: ಜಗದೀಶ್ ಕುಮಾರ್ ಭೂಮಾ




















