ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಖೇರ್ಡಾ (ಬಿ) ಡ್ಯಾಂ ಮತ್ತು ಸುತ್ತಲಿನ ಪ್ರದೇಶದಲ್ಲಿ ದಿನೇ ದಿನೇ ಮಳೆ ಹೆಚ್ಚಾಗುತ್ತಿದ್ದು ನೀರಿನ ಹರಿವು ರಭಸವಾಗಿದ್ದ ಕಾರಣ, ಸಾರ್ವಜನಿಕರು ಕಾಳಜಿ ವಹಿಸಿ, ಮತ್ತು
ಸಾರ್ವಜನಿಕರ ಹಿತ ದೃಷ್ಟಿಯಿಂದ ಯಾರಿಗೂ ಸಹ ಪ್ರವೇಶವಿರುವುದಿಲ್ಲ. ಆ ಪ್ರದೇಶದಲ್ಲಿ ನಿರ್ಬಂಧವಿರುವುದರಿಂದ ಅಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ನೇಮಿಸಲಾಗಿದೆ, ಸಾರ್ವಜನಿಕರು ವಿನಾ ಕಾರಣ ಬಂದು ಯಾರಿಗೂ ತೊಂದರೆ ಮಾಡದಂತೆ ಹಾಗೂ ಯಾರೂ ಕೂಡ ನೀರಲ್ಲಿ ಹೋಗುವುದಾಗಲಿ ಮಾಡಬಾರದು ಎಂದು ಮುಡಬಿ ಠಾಣೆಯ ಪಿ ಎಸ್ ಐ ಕುಮಾರಿ ಜೈ ಶ್ರೀ ಹೊಡಲ್ ಹಾಗೂ ಠಾಣೆಯ ಮಹಿಳಾ ಸಿಬ್ಬಂದಿ ಕುಮಾರಿ ನೀಲಮ್ಮ ಹಾಗೂ ಮತ್ತಿತರರು ಸ್ಥಳಕ್ಕೆ ಹೋಗಿ ಅಲ್ಲಿನ ಪ್ರಸ್ತುತ ಮಾಹಿತಿ ತಿಳಿದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವರದಿ: ಶ್ರೀನಿವಾಸ ಬಿರಾದಾರ




















