ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಕಲಚೇತನರ ಆರೋಗ್ಯ ತಪಾಸಣೆ ಮತ್ತು UDID ಪ್ರಮಾಣ ಪತ್ರ ವಿತರಣಾ ಶಿಬಿರ.

ಗುರುಮಠಕಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಅಂಗವಿಕಲರ ಆರೋಗ್ಯ ತಪಾಸಣೆ ಮತ್ತು UDID (ವಿಶಿಷ್ಟ ಅಂಗವೈಕಲ್ಯ ಐಡಿ)ಪ್ರಮಾಣ ಪತ್ರ ವಿತರಣೆ ಶಿಬಿರ ಜರುಗಿತು.
ಈ ಶಿಬಿರದಲ್ಲಿ ತಜ್ಞವೈದ್ಯರಾದ ಡಾ|| ರಾಘವೇಂದ್ರ, ಡಾ|| ಶರಣಬಸಪ್ಪ, ಡಾ|| ರಾಧಿಕಾ, ಡಾ|| ರಾಮನಗೌಡ, ಡಾ॥ ಅಮೋಘ ಮತ್ತು ಡಾ॥ ಅಮಿತ್ ಭಾಗವಹಿಸಿದರು.

UDID(ವಿಶಿಷ್ಟ ಅಂಗವೈಕಲ್ಯ ಐಡಿ)ಪ್ರಮಾಣ ಪತ್ರ ಮತ್ತು ರೈಲ್ವೇ ಪ್ರಯಾಣದ ಪಾಸ್ ಸೇರಿದಂತೆ ವಿವಿಧ ಸೌಲಭ್ಯದಿಂದ ವಂಚಿತರಾದ ನೂರಕ್ಕೂ ಅಧಿಕ ವಿಕಲಚೇತನರು ಇಂದು ತಜ್ಞ ವೈದ್ಯರಿಂದ ತಪಾಸಣೆಗೆ ಒಳಪಟ್ಟರು.

ಕಡಿಮೆ ದೃಷ್ಠಿದೋಷ, ಬುದ್ದಿಮಾಂದ್ಯ, ಶ್ರವಣದೋಷ, ಪೋಲಿಯೋ ವಿವಿಧ ಬಗೆಯ ಒಟ್ಟು 99 ಜನ ವಿಕಲಚೇತನರು ಭಾಗವಹಿಸಿ ರೈಲ್ವೆ ಪಾಸ್ ಸೌಲಭ್ಯ ಸೇರಿದಂತೆ ಯುಡಿಐಡಿ ಕಾರ್ಡಗಾಗಿ ಶಿಬಿರದಲ್ಲಿ ಅರ್ಜಿ ಸಲ್ಲಿಸಿದರು.

ಇಂದಿನ ಶಿಬಿರದಲ್ಲಿ ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹೇಶ್ ಸಜ್ಜನ, ತಾಲೂಕ ಗ್ರೇಡ್ 2 ತಹಶೀಲ್ದಾರ್ ನರಸಿಂಹ ಸ್ವಾಮಿ, ಗುರುಮಠಕಲ್ ಎಪಿಡಿ ಸಂಸ್ಥೆಯ ತಾಲೂಕ ಸಂಯೋಜಕ ವಿರೂಪಾಕ್ಷ ಮಾಲಿಪಾಟೀಲ ಹಾಗೂ ಸಹಾಯಕರು ಮತ್ತು ಅರ್ ಪಿಡಿ ಟಾಸ್ಕ ಫೋರ್ಸ್ ಸದಸ್ಯರು ಭಾಗವಹಿಸಿ ಶಿಬಿರದ ನಿರ್ವಹಣೆ ಮಾಡಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!