ಬಳ್ಳಾರಿ / ಕಂಪ್ಲಿ : ತಾಲೂಕಿನ ಬುಕ್ಕಸಾಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯ ಗೋದಾಮು ಆವರಣದಲ್ಲಿ ಸಂಘದ ಅಧ್ಯಕ್ಷ ಕೆ.ರಾಜೇಶ ಅವರ ಅಧ್ಯಕ್ಷತೆಯಲ್ಲಿ 39ನೇ ವಾರ್ಷಿಕ ಮಹಾಜನ ಸಭೆ ಗುರುವಾರ ನಡೆಯಿತು.
ಮುಖ್ಯಕಾರ್ಯನಿರ್ವಾಹಕ ಕಟ್ಟೆ ಯರ್ರಿಸ್ವಾಮಿ ಅವರು ವಾರ್ಷಿಕ ಮಹಾಜನ ಸಭೆಯ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 1300 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 46 ಲಕ್ಷ 91 ಸಾವಿರ ಶೇರು ಬಂಡವಾಳ ಹೊಂದಿದೆ. ಸುಮಾರು 1 ಕೋಟಿ 28 ಲಕ್ಷ 37 ಸಾವಿರ ಠೇವಣಿ ಸಂಗ್ರಹಿಸಿದೆ. ಸುಮಾರು 3 ಕೋಟಿ 5 ಲಕ್ಷ 9 ಸಾವಿರ ರೂ.ಗಳ ಕೆಸಿಸಿ ಸಾಲವನ್ನು 290 ಜನರಿಗೆ ವಿತರಿಸಿದೆ. ಮಧ್ಯಮಾವಧಿ ಸಾಲವನ್ನು 2 ಜನ ರೈತರಿಗೆ ಸುಮಾರು 2 ಲಕ್ಷ 20 ಸಾವಿರ ವಿತರಿಸಲಾಗಿದೆ. ಇಬ್ಬರಿಗೆ ಸುಮಾರು 10 ಸಾವಿರ ರೂ.ಗಳ ಪಿಗ್ಮಿ ಠೇವಣಿ ಸಾಲ ನೀಡಲಾಗಿದೆ. ಮಹಿಳಾ ಸ್ವ-ಸಹಾಯ ಸಂಘದ 2 ಗುಂಪುಗಳಿಗೆ ಸುಮಾರು 11 ಲಕ್ಷ 4 ಸಾವಿರ 876 ರೂ.ಗಳ ಸಾಲ ವಿತರಿಸಿದೆ. 66 ಲಕ್ಷ 97 ಸಾವಿರ ಬಿಡಿಪಿ ಸಾಲ ನೀಡಲಾಗಿದೆ. 40 ಜನರು ಯಶಸ್ವಿನಿ ಯೋಜನೆಗೆ ಒಳಪಟ್ಟಿದ್ದಾರೆ. ಸುಮಾರು 71 ಲಕ್ಷ 83 ಸಾವಿರ ರೂ.ಗಳ ರಸಗೊಬ್ಬರದ ವ್ಯವಹಾರ ನಡೆಸಿ, ಸುಮಾರು 2 ಲಕ್ಷ 82 ಸಾವಿರ 908 ರೂ.ಗಳ ಲಾಭ ಹೊಂದಿದೆ. 2024-25ನೇ ಸಾಲಿನಲ್ಲಿ ಸಂಘವು ಸುಮಾರು 2ಲಕ್ಷ 63 ಸಾವಿರದ 462 ರೂ.ಗಳ ನಿವ್ವಳ ಲಾಭಗಳಿಸಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹರಿಜನ ಗುರುರಾಜ, ಕಾರ್ಯಕಾರಿ ಮಂಡಳಿ ಸದಸ್ಯರಾದ ಬಿ.ಸೋಮಶೇಖರ, ಎ.ಚಂದ್ರಶೇಖರ, ಎಲ್.ಎಸ್.ರುದ್ರಪ್ಪ, ಕೆ.ಮಹ್ಮದ್ ರಫೀಕ್, ಕಟ್ಟೆ ರ್ರಿಸ್ವಾಮಿ, ಹೈದರ ಖಾಜಾಸಾಬ್, ಎಂ.ಸಿದ್ದಲಿಂಗೇಶ್ವರ, ನಾಯಕರ ವಿರೇಶ, ಬಿ.ಅನ್ನಪೂರ್ಣ, ಜಿ.ಪದ್ಮಾವತಿ, ಯು.ಮಂಜುನಾಥ ಸೇರಿದಂತೆ ಸ್ಥಳೀಯ ರೈತ ಮುಖಂಡರು, ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















